ಮನೆಗಳಿಗೆ ನುಗ್ಗಿ ಕಳ್ಳತನ: ಆರೋಪಿಯಿಂದ ಚಿನ್ನ, ಬೆಳ್ಳಿ ವಶಕ್ಕೆ
ಪುತ್ತೂರು: ಪುತ್ತೂರು, ವಿಟ್ಲ, ಮಿತ್ತೂರು ಸೇರಿದಂತೆ ಕಳೆದ ಕೆಲವು ಸಮಯಗಳಿಂದ ನಡೆದ ಮನೆಗಳಿಂದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿರುವ ಅರೋಪಿ ತಾನು ನಡೆಸಿದ ಕಳವಿನ ಕುರಿತು ಮಹತ್ವದ ಸುಳಿವು ನೀಡಿದ್ದು, ಆತನಿಂದ 38 ಗ್ರಾಂ ಚಿನ್ನ ಮತ್ತು 18 ಬೆಳ್ಳಿಯ ನಾಣ್ಯವನ್ನು ಸ್ವಾಧೀನ ಪಡೆದು ಕೊಳ್ಳಲಾಗಿದೆ.
ಮಂಜೇಶ್ವರ ತಾಲೂಕಿನ ಕುಂಬ್ಳೆಯ ಇಬ್ರಾಹಿಂ ಖಲಂದರ್ (31) ಬಂಧಿತ ಆರೋಪಿ. ಅ.27ರಂದು ಡಿವೈಎಸ್ಪಿ ವಿಶೇಷ ತಂಡ ಆರೋಪಿಯನ್ನು ಬಂಧಿಸಿದ್ದು, ಅ.28ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಿಂದ ಹೆಚ್ಚಿನ ಮಾಹಿತಿ ವಿಚಾರಣೆಗಾಗಿ ಕಸ್ಟಡಿಗೆ ಕೇಳಿಕೊಂಡಿದ್ದರು. ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಅ.30ಕ್ಕೆ ಅರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Next Story