ದ.ಕ. ಜಿಲ್ಲೆಯ 4 ತಾಲೂಕಿಗೆ 4 ಹೊಸ ಆಂಬುಲೆನ್ಸ್: ಬಂಟ್ವಾಳ ಆಸ್ಪತ್ರೆಯಲ್ಲಿ ಸಚಿವರಿಂದ ಲೋಕಾರ್ಪಣೆ

ಬಂಟ್ವಾಳ, ಅ. 29: ದ.ಕ. ಜಿಲ್ಲೆಯ ವಿವಿಧ ತಾಲೂಕಿನ ಸಮುದಾಯ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಕೊರತೆಯಿಂದ ಗ್ರಾಮೀಣ ಭಾಗದ ರೋಗಿಗಳು ಸಮಸ್ಯೆ ಅನುಭಸುತ್ತಿದ್ದ ಹಿನ್ನಲೆಯಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಿಗೆ ತಲಾ ಒಂದೊಂದು ಹೆಚ್ಚುವರಿ ಹೊಸ ಆಂಬುಲೆನ್ಸ್ ಕೊಡುಗೆ ನೀಡಲು ಕಂಪೆನಿಯೊಂದು ಮುಂದೆ ಬಂದಿದೆ.
ಆಯಾ ತಾಲೂಕಿನಲ್ಲಿ ಒಂದೇ ಆಂಬುಲೆನ್ಸ್ ಇರುವ ಕಾರಣ ಗ್ರಾಮೀಣ ಭಾಗದ ರೋಗಿಗಳಿಗೆ ಸೂಕ್ತ ಸೇವೆ ಸಿಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿತ್ತು. ಅದಲ್ಲದೆ, ತುರ್ತು ಸಂದರ್ಭದಲ್ಲಿ ತಾಲೂಕು ಆಸ್ಪತ್ರೆಗಳಿಗೆ ಹೋಗಲು ವಿವಿಧ ಸಂಘಗಳ ಹಾಗೂ ಖಾಸಗಿ ಆಸ್ಪತ್ರೆಯಿಂದ ದೂಬಾರಿ ವೆಚ್ಚ ತೆತ್ತು ಆಂಬುಲೆನ್ಸ್‍ಗಳನ್ನು ಬಳಸಿಕೊಳ್ಳುತ್ತಿದ್ದ ಬಡವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿತ್ತು. ಈ ಎಲ್ಲ ಸಮಸ್ಯೆಗಳ ಬಗ್ಗೆ ತಾಲೂಕು ಆರೋಗ್ಯ ಇಲಾಖೆ ಹೆಚ್ಚುವರಿ ಆಂಬುಲೆನ್ಸ್‍ಗಾಗಿ ಬೇಡಿಕೆಯನ್ನಿಟ್ಟಿದ್ದು, ಇದೀಗ ಸಂಸ್ಥೆಯೊಂದು ತಾಲೂಕಿನ ನಾಲ್ಕು ಆಸ್ಪತ್ರೆಗಳಿಗೆ ತಲಾ ಒಂದೊಂದು ಆಂಬುಲೆನ್ಸ್ ವಾಹನಗಳನ್ನು ಕೊಡುಗೆಯಾಗಿ ನೀಡಲಿದೆ.
Next Story





