ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 'ಮರುಪಾವತಿ ಅಭಿಯಾನ'
ಬೆಂಗಳೂರು, ಅ.29: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಸಹಾಯಧನ, ಶ್ರಮಶಕ್ತಿ, ಕಿರು ಸಾಲ, ನೇರ ಸಾಲ, ಅರಿವು ಸಾಲದ ಯೋಜನೆಗಳಲ್ಲಿ ಸಾಲ ಪಡೆದಿರುವ ಮುಸ್ಲಿಮ್, ಕ್ರೈಸ್ತ, ಜೈನ ಹಾಗೂ ಇತರೆ ಜನಾಂಗದವರಿಂದ ಸಾಲದ ಹಣ ಸಂಗ್ರಹಿಸಲು ನವೆಂಬರ್ ತಿಂಗಳಿನಲ್ಲಿ ಮರುಪಾವತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಹಣ ಮರುಪಾವತಿ ಮಾಡದ ಫಲಾನುಭವಿಗಳಿಂದ ಬಾಕಿ ಸಾಲ-ಬಡ್ಡಿಯ ಕಂತುಗಳ ಹಣವನ್ನು ಜಿಲ್ಲಾ ಕಚೇರಿಗೆ ಅಥವಾ ಆಯಾ ಕ್ಷೇತ್ರದಲ್ಲಿ ಕಚೇರಿಗಳಿಗೆ ಮರುಪಾವತಿ ಅಭಿಯಾನ ಹಮ್ಮಿಕೊಂಡಿರುವ ದಿನಾಂಕದಂದು ಪಾವತಿಸಿ ರಶೀದಿ ಪಡೆಯುವಂತೆ ಪ್ರಕಟನೆ ತಿಳಿಸಿದೆ.
ಗಾಂಧಿನಗರ (ನ.2ರಿಂದ 5ರವರೆಗೆ), ಮಲ್ಲೇಶ್ವರ (ನ.6ರಿಂದ 8), ವಿಜಯನಗರ (ನ.11ರಿಂದ 13), ಚಾಮರಾಜಪೇಟೆ (ನ.14ರಿಂದ 18), ಚಿಕ್ಕಪೇಟೆ (ನ.19ರಿಂದ 21), ಶಿವಾಜಿನಗರ (ನ.22ರಿಂದ 25), ಜಯನಗರ (ನ.26ರಿಂದ 28), ಶಾಂತಿನಗರ (ನ.29), ಬಸವನಗುಡಿ ಶಾಸಕರ ಕಚೇರಿಯಲ್ಲಿ 30ರಂದು ಮರುಪಾವತಿ ಅಭಿಯಾನ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22114815 ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.





