ಮೊಸಳೆಯ ಜೊತೆ ಹೋರಾಡಿ ಅದರ ಕಣ್ಣು ಕಿತ್ತು ಸ್ನೇಹಿತೆಯನ್ನು ರಕ್ಷಿಸಿದ ಬಾಲಕಿ

ಹರಾರೆ, ಅ.30: ತನ್ನ ಸ್ನೇಹಿತೆಯನ್ನು ಮೊಸಳೆಯೊಂದರಿಂದ ರಕ್ಷಿಸಲು ಜಿಂಬಾಬ್ವೆಯ ಶಾಲಾ ಬಾಲಕಿಯೊಬ್ಬಳು ಅದರ ಬೆನ್ನನ್ನೇರಿ ಕಣ್ಣುಗಳನ್ನು ಕಿತ್ತು ಅಪ್ರತಿಮ ಸಾಹಸ ಮೆರೆದಿದ್ದಾಳೆ.
ಇಲ್ಲಿನ ಸಿಂಡೆರೆಲಾ ಗ್ರಾಮದ ಕೆರೆಯಲ್ಲಿ ಬಾಲಕಿಯರು ಈಜುತ್ತಿದ್ದಾಗ 9 ವರ್ಷದ ಲಟೋಯ ಮುವಾನಿ ಎಂಬಾಕೆಯ ಮೇಲೆ ಮೊಸಳೆ ದಾಳಿ ನಡೆಸಿತ್ತು. ಇದನ್ನು ನೋಡಿದ ಆಕೆಯ ಸ್ನೇಹಿತೆ ರೆಬೆಕ್ಕಾ ಮುಂಕೊಂಬ್ವೆ ಸಮಯ ವ್ಯರ್ಥ ಮಾಡದೆ ಲಟೋಯಳನ್ನು ಎಳೆದೊಯ್ಯುತ್ತಿದ್ದ ಮೊಸಳೆಯ ಬೆನ್ನಿಗೆ ಹಾರಿ ಅದು ತನ್ನ ಸ್ನೇಹಿತೆಯನ್ನು ಬಿಡುವ ತನಕ ಅದರ ಕಣ್ಣುಗಳಿಗೆ ದಾಳಿ ನಡೆಸಿದ್ದಾಳೆ. ಮೊಸಳೆ ಬಾಲಕಿಯನ್ನು ಬಂಧಮುಕ್ತಗೊಳಿಸುತ್ತಿದ್ದಂತೆಯೇ ಇಬ್ಬರು ಬಾಲಕಿಯರೂ ದಂಡೆಯತ್ತ ಈಜಿ ಸುರಕ್ಷಿತವಾಗಿ ವಾಪಸಾದರು.
ಮೊಸಳೆ ರೆಬೆಕ್ಕಾಳಿಗೆ ಯಾವುದೇ ಹಾನಿಯುಂಟು ಮಾಡಿರದೇ ಇದ್ದರೂ ಲಟೋಯಾಳ ಕೈ ಕಾಲುಗಳನ್ನು ಮೊಸಳೆ ಎಳೆದಾಡಿದ್ದರಿಂದ ಉಂಟಾದ ಗಾಯಗಳ ಚಿಕಿತ್ಸೆಗೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯೀಗ ಗುಣಮುಖಳಾಗುತ್ತಿದ್ದಾಳೆ.
Next Story