ಬಾಚಕೆರೆ ಕ್ಷೇತ್ರದ ಹುಂಡಿ ಕಳವು: ಆರೋಪಿ ವಶಕ್ಕೆ
ಬಂಟ್ವಾಳ, ಅ. 30: ಬಂಟ್ವಾಳ ತಾಲೂಕಿನ ಸರಪಾಡಿ ಸಮೀಪದ ಬಾಚಕೆರೆ ಶ್ರೀದುರ್ಗಾ ಪರಮೇಶ್ವರೀ ದೇವಸ್ಥಾನದ ಕಾಣಿಕೆ ಡಬ್ಬಿಯಿಂದ ನಗದು ಕಳವು ಆರೋಪದ ಮೇರೆಗೆ ಓರ್ವನನ್ನು ಕುಂಟಾಲಪಲ್ಕೆ ನಿವಾಸದ ಬಳಿ ಸ್ಥಳೀಯರು ಹಿಡಿದು ಮಂಗಳವಾರ ರಾತ್ರಿ ಪೊಲೀಸರಿಗೊಪ್ಪಿಸಿದ್ದಾರೆ.
ಕುಂಟಾಲಪಲ್ಕೆ ನಿವಾಸಿ ಮುಸ್ತಾಫ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅ. 24ರ ಮಧ್ಯರಾತ್ರಿ ಸುಮಾರು 12 ಗಂಟೆಯ ವೇಳೆಗೆ ದೇವಸ್ಥಾನದ ಕಾಣಿಕೆ ಡಬ್ಬಿ ಮುರಿದು ಅದರಲ್ಲಿದ್ದ ನಗದನ್ನು ಕಳವಾಗಿತ್ತು. ಈ ಕೃತ್ಯ ದೇಗುಲದ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಇದರ ಆಧಾರದಲ್ಲಿ ಆರೋಪಿಯ ಗುರುತು ಪತ್ತೆಹಚ್ಚಲಾಗಿತ್ತು. ಈ ಬಗ್ಗೆ ಸುಂದರ ಬಾಚಕೆರೆ ಅವರ ದೂರಿನನ್ವಯ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈತ ಮೂಗ ಮತ್ತು ಕಿವುಡನಾಗಿದ್ದು, ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
Next Story





