Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಬಂಗಾಳಿ ಮುಸ್ಲಿಮರ ವಿರುದ್ಧ ದ್ವೇಷ...

ಬಂಗಾಳಿ ಮುಸ್ಲಿಮರ ವಿರುದ್ಧ ದ್ವೇಷ ಹರಡುವುದನ್ನು ತಡೆಯಲು ಫೇಸ್‌ಬುಕ್ ವಿಫಲ: ನೂತನ ವರದಿ

ರೊಹಿಂಗ್ಯಾ ಹತ್ಯಾಕಾಂಡಕ್ಕೂ ಮೊದಲು ನಡೆದಿತ್ತು ಇದೇ ರೀತಿಯ ಪ್ರಚಾರ

ಕೃಪೆ: theprint.inಕೃಪೆ: theprint.in30 Oct 2019 9:37 PM IST
share
ಬಂಗಾಳಿ ಮುಸ್ಲಿಮರ ವಿರುದ್ಧ ದ್ವೇಷ ಹರಡುವುದನ್ನು ತಡೆಯಲು ಫೇಸ್‌ಬುಕ್ ವಿಫಲ: ನೂತನ ವರದಿ

ಹೊಸದಿಲ್ಲಿ, ಅ. 30: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಆರಂಭಿಸಿದ ಬಳಿಕ ಅಸ್ಸಾಂನಲ್ಲಿ ಬಂಗಾಳಿ ಮುಸ್ಲಿಮರನ್ನು ಗುರಿಯಾಗಿರಿಸಿ ಹರಡುತ್ತಿರುವವರಿಗೆ ಮಾಡುತ್ತಿರುವವರಿಗೆ ಕಡಿವಾಣ ಹಾಕಲು ಫೇಸ್‌ಬುಕ್ ವಿಫಲವಾಗಿದೆ ಎಂದು ನೂತನ ವರದಿಯೊಂದು ಹೇಳಿದೆ.

‘ಮೆಗಾಫೋನ್ ಫಾರ್ ಹೇಟ್’ ಹೆಸರಿನ ವರದಿಯನ್ನು ಲಾಭ ರಹಿತ ಜಾಗತಿಕ ಹೋರಾಟಗಾರರ ಗುಂಪು ‘ಆವಾಝ್’ ಬಿಡುಗಡೆ ಮಾಡಿದೆ. 1 ಲಕ್ಷ ಬಾರಿ ಶೇರ್ ಆದ ಹಾಗೂ 54 ಲಕ್ಷ ಬಾರಿ ವೀಕ್ಷಣೆಯಾದ ಬಂಗಾಳಿ ಮುಸ್ಲಿಮರನ್ನು ‘ಕ್ರಿಮಿನಲ್’, ‘ಅತ್ಯಾಚಾರಿಗಳು’, ‘ಹಂದಿಗಳು’, ‘ಭಯೋತ್ಪಾದಕರು’ ಹಾಗೂ ‘ನಾಯಿಗಳು’ ಎಂದು ಕರೆಯುವಂತಹ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ‘ಆವಾಝ್’ ಪತ್ತೆ ಹಚ್ಚಿದೆ.

 ಅಸ್ಸಾಂ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕುರಿತಂತೆ 800ಕ್ಕೂ ಅಧಿಕ ಪೋಸ್ಟ್‌ಗಳು ಹಾಗೂ ಟೀಕೆಗಳನ್ನು ಪರಿಶೀಲಿಸಿದ್ದೇವೆ. ಇದರಲ್ಲಿ ಶೇ. 26.5 ಅಥವಾ 213 ಪೋಸ್ಟ್‌ಗಳು ಹಾಗೂ ಟೀಕೆಗಳು ಫೇಸ್‌ಬುಕ್‌ನ ಸಮುದಾಯ ಗುಣಮಟ್ಟ ನೀತಿಯನ್ನು ಉಲ್ಲಂಘಿಸಿದೆ ಎಂದು ‘ಆವಾಝ್’ ತಿಳಿಸಿದೆ.

ಬೆದರಿಕೆ, ಹೆಣ್ಣುಮಕ್ಕಳಿಗೆ ವಿಷ ನೀಡುವ, ಭ್ರೂಣ ಹತ್ಯೆ ನಡೆಸುವ ಬೆದರಿಕೆ ಸೇರಿದಂತೆ 213 ಪೋಸ್ಟ್‌ಗಳಲ್ಲಿ ಫೇಸ್‌ಬುಕ್ ಕೇವಲ 96ನ್ನು ಮಾತ್ರ ಅಳಿಸಿದೆ ಎಂದು ‘ಆವಾಝ್’ ಆರೋಪಿಸಿದೆ. ‘ಆವಾಝ್’ನ ಹಿರಿಯ ಪ್ರಚಾರಕ ಅಲಾಫಿಯಾ ರೆಯಬ್, ಅಸ್ಸಾಂನ ಅಲ್ಪಸಂಖ್ಯಾತರ ವಿರುದ್ಧದ ದ್ವೇಷ ಭಾಷಣಕ್ಕೆ ಫೇಸ್‌ಬುಕ್ ಅನ್ನು ಧ್ವನಿವರ್ಧಕದಂತೆ ಬಳಸಲಾಗುತ್ತದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಫೇಸ್‌ಬುಕ್ ವಕ್ತಾರ, ‘ಆವಾಝ್’ ಸೂಚಿಸಿದ ಎಲ್ಲ ಅಂಶಗಳ ಬಗ್ಗೆ ಫೇಸ್‌ಬುಕ್ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ.

 2017ರಲ್ಲಿ ಮ್ಯಾನ್ಮಾರ್‌ನಲ್ಲಿ ಬಿಕ್ಕಟ್ಟಿನಿಂದ ನಿರ್ವಸಿತರಾದ ರೊಹಿಂಗ್ಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಫೇಸ್ ಬುಕ್‌ನಲ್ಲಿ ದ್ವೇಷ ಭಾಷಣ ಮಾಡಿದ ರೀತಿಯಲ್ಲೇ ಅಸ್ಸಾಂನ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣ ಮಾಡಲಾಗಿದೆ. ಆದರೆ, ಸಂದರ್ಭ ಮಾತ್ರ ಭಿನ್ನ ಎಂದು ‘ಆವಾಝ್’ ಹೇಳಿದೆ. ಫೇಸ್‌ಬುಕ್‌ನ ನೀತಿ ಉಲ್ಲಂಘಿಸಿದವರಲ್ಲಿ ಅಸ್ಸಾಂನ ಹಜೋಯಿಯ ಬಿಜೆಪಿ ಶಾಸಕ ಶಿಲಾದಿತ್ಯ ದೇವ್ ಕೂಡ ಸೇರಿದ್ದಾರೆ. ಅವರು ‘ಬಾಂಗ್ಲಾದೇಶಿ ಮುಸ್ಲಿಮರು’ ನಮ್ಮ ‘ತಾಯಿ ಹಾಗೂ ಸಹೋದರಿಯರನ್ನು’ ಅತ್ಯಾಚಾರ ಮಾಡುತ್ತಾರೆ ಎಂದು ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದರು. ಈ ಪೋಸ್ಟ್ ಫೇಸ್‌ಬುಕ್‌ನಲ್ಲಿ 800 ಬಾರಿ ಶೇರ್ ಆಗಿತ್ತು.

ಅನಂತರ ಅವರು ಅದನ್ನು ಅಳಿಸಿದ್ದರು. ಆದರೆ, ಫೇಸ್‌ಬುಕ್ ಈ ಎಲ್ಲ ದ್ವೇಷ ಭಾಷಣದ ಅಂಶಗಳನ್ನು ಪರಿಶೀಲಿಸಲು ಮಾನವ ನೇತೃತ್ವದ ತಂಡ ರೂಪಿಸುವ ಬಗ್ಗೆ ಭರವಸೆ ನೀಡಿಲ್ಲ ಎಂದು ‘ಆವಾಝ್’ ಆರೋಪಿಸಿದೆ. ದೇಶದ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಿ ಎಂದು ಫೇಸ್‌ಬುಕ್, ವಿಶ್ವಸಂಸ್ಥೆ ಹಾಗೂ ಭಾರತ ಸರಕಾರವನ್ನು ‘ಆವಾಝ್’ ಒತ್ತಾಯಿಸಿದೆ. ತನಿಖೆ ಹಾಗೂ ವಿಚಾರಣೆ ನಡೆಸುವ ಮೂಲಕ ಆನ್‌ಲೈನ್ ದ್ವೇಷ ಭಾಷಣಗಳನ್ನು ನಿಯಂತ್ರಿಸುವತ್ತ ಮೋದಿ ಸರಕಾರ ಕಾರ್ಯ ನಿರ್ವಹಿಸಲಿ ಎಂದು ‘ಆವಾಝ್’ ಆಗ್ರಹಿಸಿದೆ.

share
ಕೃಪೆ: theprint.in
ಕೃಪೆ: theprint.in
Next Story
X