ಕಂಟೈನರ್‌ನಲ್ಲಿ ಅಕ್ರಮ ಜಾನುವಾರು ಸಾಗಾಟ; 21 ಜಾನುವಾರು ವಶ: ಇಬ್ಬರ ಬಂಧನ

ಕೊಲ್ಲೂರು, ಅ.30: ಅಕ್ರಮವಾಗಿ ಕಂಟೈನರ್ ಲಾರಿಯಲ್ಲಿ ಸಾಗಿಸುತ್ತಿದ್ದ 21 ಜಾನುವಾರುಗಳನ್ನು ಕೊಲ್ಲೂರು ಪೊಲೀಸರು ಅ.30ರಂದು ಬೆಳಗಿನ ಜಾವ 4ಗಂಟೆ ಸುಮಾರಿಗೆ ಜಡ್ಕಲ್ ಗ್ರಾಮದ ನಾಯಿಕೊಡಿ ಎಂಬಲ್ಲಿ ಫಾರೆಸ್ಟ್ ಗೇಟ್ ಬಳಿ ವಶಪಡಿಸಿಕೊಂಡಿದ್ದಾರೆ.
ಲಾರಿಯಲ್ಲಿದ್ದ ಇಮ್ರಾನ್ ಬಾಷಾ ಮತ್ತು ತಬ್ರೇಜ್ ಬೇಫಾರಿ ಎಂಬವರನ್ನು ಬಂಧಿಸಿದ್ದಾರೆ. ಕೊಲ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಕಂಟೈನರ್ ವಾಹನವನ್ನು ನಿಲ್ಲಿಸಿ ಪರಿಶೀಲಿಸಿದಾಗ ಈ ಅಕ್ರಮ ಜಾನುವಾರು ಸಾಗಾಟ ಪತ್ತೆಯಾಯಿತು.
ಲಾರಿಯಲ್ಲಿದ್ದ 4.80ಲಕ್ಷ ರೂ. ಮೌಲ್ಯದ 12 ಕೋಣಗಳು ಮತ್ತು 2.70ಲಕ್ಷ ರೂ. ಮೌಲ್ಯದ 9 ಎಮ್ಮೆಗಳು ಹಾಗೂ 22 ಲಕ್ಷ ರೂ. ಮೌಲ್ಯದ ಕಂಟೈನರ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





