ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್
ಬೆಂಗಳೂರು, ಅ.30: ರಾಜ್ಯ ಸರಕಾರದ 2019ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ವಿಜಯನಗರದ ಕೇಶವಗೋಪಾಲ್ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. 2016ರಲ್ಲಿ ರಚನೆಯಾಗಿದ್ದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಬಿಜೆಪಿ ಸರಕಾರವು ಪಕ್ಷದ ಕಾರ್ಯಕರ್ತರಾಗಿರುವ ವಿಜಯ ಸಂಕೇಶ್ವರ, ಪ್ರಕಾಶ್ ಶೆಟ್ಟಿ, ಪ್ರಭಾತ್ ಆರ್ಟ್ ಇಂಟರ್‌ನ್ಯಾಷನಲ್‌ಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರಕಾರದ ಆಯ್ಕೆ ಸಮಿತಿಯಲ್ಲಿದ್ದ ನಿರುಪಮಾ ರಾಜೇಂದ್ರ, ರಾಜ್ಯ ಸರಕಾರ, ವಿಜಯ ಸಂಕೇಶ್ವರ, ಪ್ರಕಾಶ್ ಶೆಟ್ಟಿ, ಪ್ರಭಾತ್ ಇಂಟರ್ ನ್ಯಾಷನಲ್‌ರನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಕೇಶವಗೋಪಾಲ್ ಕೂಡ ರಾಜ್ಯೋತ್ಸವ ಪ್ರಶಸ್ತಿಯ ಆಕಾಂಕ್ಷಿಯಾಗಿದ್ದರು.
Next Story