ದಕ್ಷಿಣ ಸುಡಾನ್: 3 ಎಬೋಲಾ ನೆರವು ಕಾರ್ಯಕರ್ತರು ಹತ
ಜೂಬ (ದಕ್ಷಿಣ ಸುಡಾನ್), ಅ. 30: ದಕ್ಷಿಣ ಸುಡಾನ್ನಲ್ಲಿ ಡಿ.ಆರ್. ಕಾಂಗೊ ಗಡಿಯುದ್ದಕ್ಕೂ ಇರುವ ಎಬೋಲಾ ತಪಾಸಣಾ ಠಾಣೆಗಳಲ್ಲಿ ಕೆಲಸ ಮಾಡುತ್ತಿದ್ದ ಮೂವರು ನೆರವು ಕಾರ್ಯಕರ್ತರು ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ ಎಂದು ಅಂತರ್ರಾಷ್ಟ್ರೀಯ ವಲಸೆ ಸಂಘಟನೆ (ಐಒಎಮ್) ಬುಧವಾರ ತಿಳಿಸಿದೆ.
‘‘ಸೆಂಟ್ರಲ್ ಇಕ್ವೆಟೋರಿಯ ವಲಯದಲ್ಲಿರುವ ಮೊರೊಬೊ ಕೌಂಟಿಯಲ್ಲಿ ರವಿವಾರ ವಿರೋಧಿ ಬಣಗಳ ನಡುವೆ ಸಂಘರ್ಷ ನಡೆದಾಗ ಐಒಎಮ್ನ ಓರ್ವ ಮಹಿಳೆ ಮತ್ತು ಇಬ್ಬರು ಪುರುಷ ನೆರವು ಕಾರ್ಯಕರ್ತರು ಸಿಕ್ಕಿಹಾಕಿಕೊಂಡರು ಹಾಗೂ ಗುಂಡು ತಗುಲಿ ಮೃತಪಟ್ಟರು’’ ಎಂದು ವಿಶ್ವಸಂಸ್ಥೆಯ ಘಟಕ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇಬ್ಬರು ಪುರುಷ ನೆರವು ಕಾರ್ಯಕರ್ತರು ಗಾಯಗೊಂಡಿದ್ದಾರೆ ಹಾಗೂ ಓರ್ವ ಮಹಿಳಾ ನೆರವು ಕಾರ್ಯಕರ್ತೆ ಮತ್ತು ಮೃತಪಟ್ಟ ನೆರವು ಕಾರ್ಯಕರ್ತೆಯ ಮಗನನ್ನು ಅಪಹರಿಸಲಾಗಿದೆ.
Next Story