ಮಂದಾರ್ತಿ: ನ.1ರಂದು ಮಲ್ಲಿಗೆ ಬೆಳೆ ಮಾಹಿತಿ ಶಿಬಿರ
ಬ್ರಹ್ಮಾವರ, ಅ.30: ಜಿಲ್ಲಾ ಕೃಷಿಕ ಸಂಘದ ಬ್ರಹ್ಮಾವರ ವಲಯ ಸಮಿತಿ ವತಿಯಿಂದ ಮಲ್ಲಿಗೆ ಕೃಷಿ ಮತ್ತು ಮಾರುಕಟ್ಟೆ ಮಾಹಿತಿ ಕಾರ್ಯಕ್ರಮ ನ.1ರ ಶುಕ್ರವಾರ ಅಪರಾಹ್ನ 3:00 ಗಂಟೆಗೆ ಮಂದಾರ್ತಿ ಸುರ್ಗಿಕಟ್ಟೆಯ ಪ್ರಕೃತಿ ನರ್ಸರಿ ವಠಾರದಲ್ಲಿ ನಡೆಯಲಿದೆ.
ಕೃಷಿಕ ಸಂಘ ಬ್ರಹ್ಮಾವರ ವಲಯ ಸಮಿತಿ ಅಧ್ಯಕ್ಷ ಪ್ರಬಾಕರ ವಿ. ಶೆಟ್ಟಿ, ಕಾರ್ಯದರ್ಶಿ ಭೋಜ ಶೆಟ್ಟಿ ಮುಂಡ್ಕಿನಜಡ್ಡು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ್ ಟ್, ಕಾರ್ಯದರ್ಶಿ ರವೀಂದ್ರ ಗುಜ್ಜಬೆಟ್ಟು ಭಾಗವಹಿಸಲಿದ್ದಾರೆ.
ಮಲ್ಲಿಗೆ ಕೃಷಿ ಮಬಗ್ಗೆ ಸಮಗ್ರ ವೈಜ್ಞಾನಿಕ ಮಾಹಿತಿ ಹಾಗೂ ತಜ್ಞ ಕೃಷಿಕರಿಂದ ನಾಟಿ, ನಿರ್ವಹಣೆ, ಕೀಟ-ರೋಗ ಬಾಧೆ ಹತೋಟಿ ಕ್ರಮಗಳು, ಮಾರುಕಟ್ಟೆ ಕುರಿತ ಮಾಹಿತಿಗಳನ್ನು ನೀಡಲಾಗುತ್ತದೆ ಎಂದು ಜಿಲಾ್ಲ ಕೃಷಿಕ ಸಂಘದ ಪ್ರಕಟಣೆ ತಿಳಿಸಿದೆ.
Next Story





