ಮಂಗಳೂರು: ರೈಲು ಢಿಕ್ಕಿ; ಓರ್ವ ಮೃತ್ಯು
ಮಂಗಳೂರು, ಅ.31: ನಗರದ ಸೂಟರ್‌ಪೇಟೆ ರೈಲ್ವೆ ಟ್ರಾಕ್‌ನಲ್ಲಿ ಗುರುವಾರ ಬೆಳಗ್ಗೆ ನಡೆದ ದುರ್ಘಟನೆಯಲ್ಲಿ ಮುಲ್ಕಿ ಮುಲ್ಲಗುಡ್ಡೆ ನಿವಾಸಿ ಅಶೋಕ್ (37) ಎಂಬವರು ಮೃತಪಟ್ಟಿದ್ದಾರೆ.
ಬುಧವಾರ ರಾತ್ರಿ ರೈಲು ಢಿಕ್ಕಿ ಹೊಡೆದ ಪರಿಣಾಮ ಅಶೋಕ್ ಮೃತಪಟ್ಟಿದ್ದರು. ಆದರೆ ಮೃತರ ಬಗ್ಗೆ ತಕ್ಷಣ ಮಾಹಿತಿ ಸಿಕ್ಕಿರಲಿಲ್ಲ. ಸ್ಥಳಕ್ಕೆ ಧಾವಿಸಿದ ಪೊಲೀಸರು ಅಪರಿಚಿತ ವ್ಯಕ್ತಿಯ ಬಳಿಯಿದ್ದ ಮೊಬೈಲ್‌ನಿಂದ ಕರೆ ಮಾಡಿದ ಬಳಿಕ ಮೃತನ ಗುರುತು ಪತ್ತೆಯಾಗಿದೆ.
ಅಶೋಕ್ ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಬುಧವಾರ ರಾತ್ರಿ ಆಕಸ್ಮಿಕವಾಗಿ ರೈಲು ಢಿಕ್ಕಿ ಹೊಡೆದ ಪರಿಣಾಮ ಕೊನೆಯುಸಿರೆಳೆದಿದ್ದರು.
ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಲಾಯಿತು ಎಂದು ಪ್ರಕರಣ ದಾಖಲಿಸಿರುವ ರೈಲ್ವೆ ಪೊಲೀಸರು ತಿಳಿಸಿದ್ದಾರೆ.
Next Story