ಶಾಲಾ ವಾಹನ ಢಿಕ್ಕಿ: ವೃದ್ಧ ಸ್ಥಳದಲ್ಲೇ ಸಾವು

ಬೆಂಗಳೂರು, ಅ.31: ಶಾಲಾ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಶವಂತಪುರ ಸರ್ಕಲ್ ಬಳಿ ನಡೆದಿದೆ. ಮೃತರನ್ನು ನಂದಿನಿ ಲೇಔಟ್ ನಿವಾಸಿ ಚಿಕ್ಕೋಡಿಯಪ್ಪ(78) ಎಂದು ಗುರುತಿಸಲಾಗಿದೆ.
ಮೊಮ್ಮಗನ ಮದುವೆ ಆಮಂತ್ರಣವನ್ನು ಕೊಡಲು ನೆಲಮಂಗಲ ಕಡೆಗೆ ಹೋಗಲು ಯಶವಂತಪುರ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾಗ ವೇಗವಾಗಿ ಬಂದ ಶಾಲಾ ಬಸ್‌ವೊಂದು ಢಿಕ್ಕಿ ಹೊಡೆದಿದ್ದು, ಚಿಕ್ಕೋಡಿಯಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತದೇಹದ ಪಕ್ಕ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಆಮಂತ್ರಣ ಪತ್ರಿಕೆಗಳನ್ನು ಕಂಡು ದಾರಿ ಹೋಕರು ಮರುಗಿದರು.
ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡಿರುವ ಯಶವಂತಪುರ ಸಂಚಾರಿ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story





