ಶಾಂತವೇರಿ ಗೋಪಾಲಗೌಡರ ಪತ್ನಿ ಸೋನಕ್ಕ ನಿಧನ

ಬೆಂಗಳೂರು, ಅ.31: ಸಮಾಜವಾದಿ ನಾಯಕ ಶಾಂತವೇರಿ ಗೋಪಾಲ ಗೌಡರ ಧರ್ಮ ಪತ್ನಿ ಶ್ರೀಮತಿ ಸೋನಕ್ಕ ಗೋಪಾಲಗೌಡ(87) ಅವರು ಉಸಿರಾಟದ ತೊಂದರೆ ಯಿಂದ ಬೆಂಗಳೂರಿನ ಜೈನ್ ಆಸ್ಪತ್ರೆಯಲ್ಲಿ ಇಂದು ಸಂಜೆ ನಿಧನರಾದರು.
ಸರಕಾರಿ ಶಾಲೆಯ ಶಿಕ್ಷಕಿಯಾಗಿದ್ದ ಸೋನಕ್ಕ ಮಹಾನ್ ಸ್ವಾಭಿಮಾನಿಯಾಗಿದ್ದು, ಕೊನೆಯವರೆಗೂ ಅವರ ನಿವೃತ್ತಿ ವೇತನದಲ್ಲಿ ತಮ್ಮ ಬದುಕನ್ನು ಕಂಡುಕೊಂಡಿದ್ದರು. ಶ್ರೀಮತಿ ಸೋನಕ್ಕನವರ ನಿಧನ ಸುದ್ದಿ ತಿಳಿದ ತಕ್ಷಣ ಆಸ್ಪತ್ರೆಗೆ ಧಾವಿಸಿ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪನವರು, ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಇವರ ಕಳೇಬರವನ್ನು ಬೆಂಗಳೂರಿನ ಸದಾಶಿವನಗರದ ಅವರ ಮನೆಯಲ್ಲಿ ಇರಿಸಲಾಗಿದ್ದು ನಾಳೆ ಮಧ್ಯಾಹ್ನ 12-30ಕ್ಕೆ ಹೆಬ್ಬಾಳದ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story





