ತುಳು ಶಿವಳ್ಳಿ ಬ್ರಾಹ್ಮಣರ ವಿಶ್ವ ಸಮ್ಮೇಳನಕ್ಕೆ ಪೂರ್ವಭಾವಿ ಸಭೆ

ಉಡುಪಿ, ಅ.31:ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ನಡೆಯುವ ತುಳು ಶಿವಳ್ಳಿ ಮಾಧ್ವ ಮಂಡಲದ ವಿಶ್ವ ಸಮ್ಮೇಳನದ ಪೂರ್ವಭಾವಿ ಸಮಾಲೋಚನಾ ಸಭೆ ಗುರುವಾರ ಶ್ರೀಕೃಷ್ಣ ಮಠದ ಮಧ್ವಮಂಟಪದಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ವಿಶ್ವ ಸಮ್ಮೇಳನದ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು. ಸಮ್ಮೇಳನಕ್ಕೆ ಕೈಗೊಳ್ಳಬೇಕಾದ ವಿವಿಧ ಸಿದ್ಧತೆಗಳ ಕುರಿತು ಚರ್ಚೆ ನಡೆಯಿತು. ವಿವಿಧ ಸಮಿತಿಗಳಿಗೆ ಜವಾಬ್ದಾರಿಗಳನ್ನು ವಹಿಸಿಕೊಡಲಾಯಿತು.
ಸಭೆಯಲ್ಲಿ ಮಂಗಳೂರಿನ ಎಂ.ಬಿ.ಪುರಾಣಿಕ್, ಪರ್ಕಳ ಮಂಜುನಾಥ ಉಪಾಧ್ಯಾಯ, ಮಠದ ಪಿಅರ್‌ಓ ಶ್ರೀಶ ಭಟ್ ಕಡೆಕಾರ್, ಬಾಲಕೃಷ್ಣ ಮಡಂಬಡಿತ್ತಾಯ, ಜಯರಾಮ ಆಚಾರ್ಯ ಬೈಲೂರು, ಶೋಭಾ ಉಪಾಧ್ಯಾಯ, ವೆಂಕಟರಮಣ ಬಲ್ಲಾಳ್, ರಂಗನಾಥ ಉಂಗುರುಪುಳಿತ್ತಾಯ ಭಾಗವಹಿಸಿದ್ದರು.
ವಿವಿಧ ಬ್ರಾಹ್ಮಣ ವಲಯದ ಅಧ್ಯಕ್ಷರು, ಪದಾಧಿಕಾರಿಗಳು, ಶ್ರೀಕಾಂತ್ ಉಪಾಧ್ಯಾಯ,ಸಂದೀಪ್ ಮಂಜ, ಎ. ವಿ.ಎಸ್.ಸಗ್ರಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.
Next Story





