ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಹೊಗೆ ತಪಾಸಣೆ ನಡೆಸುವ ವಾಹನಕ್ಕೆ ಚಾಲನೆ

ಬೆಂಗಳೂರು, ಅ.31: ಕೆಎಸ್ಸಾರ್ಟಿಸಿಯ ಬಸ್‌ಗಳಲ್ಲಿ ಅನಿರೀಕ್ಷಿತ ಹೊಗೆ ತಪಾಸಣೆ ನಡೆಸುವ ಪ್ರಕೃತಿ ವಾಹನಕ್ಕೆ ಕೆಎಸ್ಸಾರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಚಾಲನೆ ನೀಡಿದರು.
ಬಸ್ಸುಗಳಲ್ಲಿ ಅನಿರೀಕ್ಷಿತ ಹೊಗೆ ತಪಾಸಣೆಯನ್ನು ನಡೆಸಲು ಪ್ರಕೃತಿ ವಾಹನವನ್ನು 2015ರಲ್ಲಿ ಸೇರ್ಪಡೆಗೊಳಿಸಲಾಯಿತು. ಪ್ರತಿಯೊಂದು ಘಟಕ, ವಿಭಾಗಗಳಲ್ಲಿ ತಪಾಸಣೆ ನಡೆಸಲಾಗುತ್ತಿದ್ದರೂ ಮಾಲಿನ್ಯ ನಿಯಂತ್ರಿಸಲು ಅನುವಾಗುವಂತೆ ಅನಿರೀಕ್ಷಿತ ಹೊಗೆ ತಪಾಸಣಾ ವಾಹನವನ್ನು ಪ್ರಾರಂಭಿಸಿ 2015ರಿಂದ ಅಕ್ಟೋಬರ್-2019ರ ವರೆಗೆ ಒಟ್ಟು 13,830 ವಾಹನಗಳ ಹೊಗೆ ತಪಾಸಣೆ ನಡೆಸಲಾಗಿದೆ. ಅವುಗಳಲ್ಲಿ ಶೇ.3.68 ವಾಹನಗಳಲ್ಲಿ ದೋಷ ಕಂಡು ಬಂದಿರುತ್ತದೆ. ನಂತರ ಅವುಗಳನ್ನು ದುರಸ್ತಿಗೊಳಿಸಿ ಕಾರ್ಯಾಚರಣೆಗೊಳಿಸಲಾಗಿರುತ್ತದೆ.
ಹೊಗೆ ತಪಾಸಣೆ ಯಂತ್ರ: ಈ ಹೊಗೆ ತಪಾಸಣೆ ಯಂತ್ರವು ಹಲವು ಸಂಕೀರ್ಣ ಸೌಲಭ್ಯಗಳುಳ್ಳ ಏಕೈಕ ಯಂತ್ರವಾಗಿದ್ದು, ಇದು ಎಲ್‌ಇಡಿ ರಿಮೋರ್ಟ್ ಕಂಟ್ರೋಲ್, ಯುಎಸ್‌ಬಿಗಳನ್ನು ಗಣಕಯಂತ್ರಕ್ಕೆ ಸಂಪರ್ಕಿಸಲು ಅನುಕೂಲವಾಗುವಂತೆ ಹೊಂದಿರುತ್ತದೆ. ಈ ಯಂತ್ರವು automatic zero calibration ಸೌಲಭ್ಯ ಹೊಂದಿದ್ದು, ಪ್ರತಿಯೊಂದು acceleration ಪರೀಕ್ಷೆ ಮಾಡುವಾಗಲೂ ಸಹ ಕಾರ್ಯೋನ್ಮುಖವಾಗುತ್ತದೆ. ಕಾರ್ಯಕ್ರಮದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ, ಕೆಎಸ್ಸಾರ್ಟಿಸಿ ನಿರ್ದೇಶಕಿ ಕವಿತಾ ಮನ್ನಿಕೇರಿ ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.







