ನ.1ರಂದು ಕೆ.ಸಿ.ಎಫ್ ಬಹರೈನ್ ವತಿಯಿಂದ ಮೀಲಾದ್ ಕಾನ್ಫರೆನ್ಸ್
ಬಹರೈನ್: ಕರ್ನಾಟಕ ಕಲ್ಚರಲ್ ಫೌಂಡೇಷನ್ (ಕೆ.ಸಿ.ಎಫ್) ಬಹರೈನ್ ವತಿಯಿಂದ ‘ಹಬೀಬ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ನಮ್ಮ ಜೊತೆ’ ಎಂಬ ಎಂಬ ಘೋಷ ವಾಕ್ಯದೊಂದಿಗೆ ಬೃಹತ್ ಮೀಲಾದ್ ಕಾನ್ಫರೆನ್ಸ್ ನ.1 ರಂದು ಶುಕ್ರವಾರ ಪಾಕಿಸ್ತಾನ ಕ್ಲಬ್ ಮನಾಮದಲ್ಲಿ ನಡೆಯಲಿದೆ.
ಅಸಯ್ಯದ್ ಅಲಿ ಬಾಫಖಿ ತಂಙಳ್ ದುಃಆ ಆಶೀರ್ವಚನ ನೀಡಲಿದ್ದಾರೆ. ಸಯ್ಯದ್ ನಿಝಾಮುದ್ದೀನ್ ಬಾಫಖಿ ತಂಙಳ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸ ಉಸ್ತಾದ್ ಅವರು ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಎಂದು ಕೆ.ಸಿ.ಎಫ್ ಬಹರೈನ್ ಮೀಲಾದ್ ಸ್ವಾಗತ ಸಮಿತಿ ಚೇರ್ಮ್ಯಾನ್ ಬಷೀರ್ ಕಾರ್ಲೆ ಹಾಗೂ, ಕನ್ವೀನರ್ ಸಯ್ಯದ್ ಇರ್ದೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕೆಸಿಎಫ್ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ಅಧ್ಯಕ್ಷರಾದ ಅಲಿ ಮುಸ್ಲಿಯಾರ್, ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಟಲ್, ಪ್ರಧಾನ ಕಾರ್ಯದರ್ಶಿ ಹಾರೀಸ್ ಸಂಪ್ಯ ಕೋಶಾಧಿಕಾರಿ ಇಕ್ಬಾಲ್ ಮಂಜನಾಡಿ ಹಾಗೂ ಸಾಂತ್ವನ ವಿಭಾಗದ ಚೆಯರ್ಮೆನ್ ಕರೀಂ ಉಚ್ಚಿಲ,ಕನ್ವೀನರ್ ಹನೀಫ್ ಜಿ ಕೆ ರಾಷ್ಟ್ರೀಯ ಸಮಿತಿ ಪಬ್ಲಿಕೇಶನ್ ವಿಭಾಗದ ಚಯರ್ಮೆನ್ ಲತೀಫ್ ಪೆರೋಲಿ, ಕಾರ್ಯದರ್ಶಿ ತೌಫೀಕ್ ಉಮ್ಮರ್ ಉಪಸ್ಥಿತರಿದ್ದರು.