ಕಾಪು : ಕನ್ನಡ ರಾಜ್ಯೋತ್ಸವ ಸಂಭ್ರಮ

ಪಡುಬಿದ್ರಿ: ಹಿರಿಯರ ತ್ಯಾಗ, ಹೋರಾಟ ಮತ್ತು ಕನಸುಗಳ ಸಾಕಾರ ರೂಲವಾಗಿ ಸುವರ್ಣ ಕರ್ನಾಟಕದ ಉದಯವಾಗಿದೆ. ಅದನ್ನು ಉಳಿಸಿಕೊಂಡು ಬರುವ ಮೂಲಕ ಮೂಲಕ ಸುವರ್ಣ ಕರ್ನಾಟಕದ ಅಬಿವೃದ್ಧಿಗಾಗಿ ಚಿಂತಿಸೋಣ ಎಂದು ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್ ಕರೆ ನೀಡಿದರು.
ಕಾಪು ತಾಲ್ಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಕಾಪು ಬಂಗ್ಲೆ ಮೈದಾನಲ್ಲಿ ಜರಗಿದ ತಾಲ್ಲೂಕು ಮಟ್ಟದ ಪ್ರಥಮ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ರಾಜ್ಯೋತ್ಸವ ಆಚರಣೆ ಕೇವಲ ಒಂದು ದಿನಕ್ಕೆ ಮಾತ್ರಾ ಸೀಮಿತವಾಗಿರಿಸದೇ ನಿತ್ಯ ನಿರಂತರತೆಯನ್ನು ಕಾಪಾಡೋಣ. ಸ್ವಚ್ಚತೆ, ನೀರು ಸಹಿತವಾದ ವಿವಿಧ ಮೂಲಭೂತ ಅವಶ್ಯಕತೆಗಳ ಕುರಿತಾಗಿ ಜಾಗೃತಿ ಹೊಂದೋಣ ಎಂದರು.
ಉಡುಪಿ ಜಿಲ್ಲಾ ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸದಸ್ಯರಾದ ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಸುವರ್ಣ, ತಾಲ್ಲೂಕು ಪಂ. ಸದಸ್ಯೆ ರೇಣುಕಾ ಪುತ್ರನ್, ಪುರಸಭೆ ಸದಸ್ಯರಾದ ಅನಿಲ್ ಕುಮಾರ್, ಕಿರಣ್ ಆಳ್ವ, ರಮಾ ವೈ. ಶೆಟ್ಟಿ, ಶಾಂಭವಿ ಕುಲಾಲ್, ಮಮತಾ ಸಾಲ್ಯಾನ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಮರಾಠೆ, ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ, ಪಡುಬಿದ್ರಿ ಪೊಲೀಸ್ ಉಪನಿರೀಕ್ಷಕ ಸುಬ್ಬಣ್ಣ, ಕಾಪು ಕಂದಾಯ ಪರಿವೀಕ್ಷಕ ರವಿಶಂಕರ್ ಕೆ. ಮೊದಲಾದವರು ಉಪಸ್ಥಿತರಿದ್ದರು.
ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಸ್ವಾಗತಿಸಿದರು.
ಉಪನ್ಯಾಸಕರಾದ ನಾಗರಾಜ್ ಜಿ.ಎಸ್., ಶಿವಣ್ಣ ಬಾಯಾರ್ ಕಾರ್ಯಕ್ರಮ ನಿರೂಪಿಸಿದರು. ಲೆಸ್ಟರ್ನ್ ಕ್ಲಾರೆನ್ಸ್ ಕರ್ನೇಲಿಯೋ ವಂದಿಸಿದರು.
ಕಾಪು ವಿದ್ಯಾನಿಕೇತನ್ ಶಾಲೆಯಿಂದ ಬಂಗ್ಲೆ ಮೈದಾನದವರೆಗೆ ಜಾಥಾ ನಡೆಯಿತು. ಕಾಪು ಪುರಸಭೆಯ ವತಿಯಿಂದ ವಿಕಲ ಚೇತನ ಫಲಾನುಭವಿಗೆ ತ್ರಿಚಕ್ರ ವಾಹನ ವಿತರಿಸಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು. ಸರ್ಕಾರದ ವಿವಿಧ ಸವಲತ್ತುಗಳನ್ನು ವಿತರಿಸಲಾ ಯಿತು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಧನ್ವಿ ಪೂಜಾರಿ ಮರವಂತೆ ಇವರಿಂದ ಮತದಾನ ಜಾಗೃತಿಯ ಬಗ್ಗೆ ಪ್ರಹಸನ ನೀಡಿದರು.







