ಆರೋಗ್ಯ ಸ್ಕಿಮ್ ಹೆಸರಿನಲ್ಲಿ ಚಿನ್ನಾಭರಣ ವಂಚನೆ
ಉಡುಪಿ, ನ.1: ಆರೋಗ್ಯ ಸ್ಕಿಮ್ ಮಾಡಿಸುವುದಾಗಿ ಮಹಿಳೆಯನ್ನು ನಂಬಿಸಿ ಚಿನ್ನಾಭರಣ ದೋಚಿರುವ ಘಟನೆ ಅ.31ರಂದು ಬೆಳಗ್ಗೆ ಉಡುಪಿ ನಗರದಲ್ಲಿ ನಡೆದಿದೆ.
ಉದ್ಯಾವರ ಪಿತ್ರೋಡಿ ನಿವಾಸಿ ಶಾರದಾ ತಿಂಗಳಾಯ(65) ಎಂಬವರು ಉಡುಪಿಯ ಕೆಎಂ ಮಾರ್ಗದಲ್ಲಿರುವ ಖಾಸಗಿ ಆಸ್ಪತ್ರೆಗೆ ಬಂದಿದ್ದು, ಆ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ರಾಜೇಶ್ ಎಂದು ಹೇಳಿ ಪರಿಚಯಿಸಿಕೊಂಡು ತಾನು ನಿಮ್ಮ ಸಂಬಂಧಿಕನೆಂದು ನಂಬಿಸಿದ್ದನು.
ಬಳಿಕ ಆತ ಶಾರದಾ ಅವರಿಗೆ 3,00,000ರೂ. ಮೊತ್ತದ ಆರೋಗ್ಯ ಸ್ಕೀಮ್ ಮಾಡಿಸಿಕೊಡುವುದಾಗಿ ಹೇಳಿ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದನು. ಅಲ್ಲಿ ಶಾರದಾರಲ್ಲಿದ್ದ ಒಟ್ಟು 20 ಗ್ರಾಂ ತೂಕದ ಒಂದು ಚಿನ್ನದ ಸರ ಮತ್ತು ಒಂದು ಉಂಗುರವನ್ನು ದೋಚಿ ಪರಾರಿಯಾದನು ಎಂದು ದೂರಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





