ಅಜ್ಜರಕಾಡು ಜಿಲ್ಲಾಸ್ಪತ್ರೆಯಿಂದ ರೋಗಿ ನಾಪತ್ತೆ

ಉಡುಪಿ, ನ.1: ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ರೋಗಿಯೊಬ್ಬರು ನಾಪ್ತೆಯಾದ ಘಟನೆ ಗುರುವಾರ ನಡೆದಿದೆ.
ನಾಪತ್ತೆಯಾದವರನ್ನು ಬೈಂದೂರು ತಾಲೂಕಿನ ಶಿರೂರು ಗ್ರಾಮದ, ಅಳ್ವೆಗದ್ದೆ ನಿವಾಸಿ ಲಕ್ಷ್ಮಣ್ ಮೊಗೇರ್ ಎಂದು ಗುರುತಿಸಲಾಗಿದೆ. ಆಸ್ಪತ್ರೆಯಲ್ಲಿ ಇವರ ಜೊತೆಯಲ್ಲಿದ್ದವರು ಊಟ ತರಲು ಹೊರಗೆ ಹೋದಾಗ ಯಾರಿಗೂ ಮಾಹಿತಿ ನೀಡದೆ ಲಕ್ಷ್ಮಣ್ ಮೊಗೇರ್ ತಪ್ಪಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಇವರ ಬಗ್ಗೆ ಸುಳಿವು ಸಿಕ್ಕಿದರೆ ಮೊಬೈಲ್- 8884944347, 8095637961ಕ್ಕೆ ಮಾಹಿತಿ ನೀಡಬೇಕೆಂದು ವಿನಂತಿಸಲಾಗಿದೆ.
Next Story





