ಮನೆಗೆ ನುಗ್ಗಿ ಲ್ಯಾಪ್‌ಟಾಪ್ ಕಳವು
ಮಂಗಳೂರು, ನ.1:ಅಡ್ಯಾರು ಗ್ರಾಮದ ಕೋಡಿಮಜಲು ಎಂಬಲ್ಲಿ ಉರ್ಬನ್ ಡಿಸೋಜ ಎಂಬವರ ಮನೆಯ ಮಹಡಿಯಲ್ಲಿರುವ ಬಾಡಿಗೆ ರೂಮ್‌ನಲ್ಲಿ ವಾಸವಾಗಿದ್ದ ಕಾರ್ತಿಕೇಯ ಭಟ್‌ರಿಗೆ ಸೇರಿದ ಲ್ಯಾಪ್‌ಟಾಪ್ ಕಳವಾದ ಬಗ್ಗೆ ಕಂಕನಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
ದೀಪಾವಳಿಯ ರಜೆಯಲ್ಲಿ ಕಾರ್ತಿಕೇಯ ಭಟ್ ಮತ್ತವರ ಸ್ನೇಹಿತರು ಅ.26ರಂದು ಬೆಳಗ್ಗೆ 10ಕ್ಕೆ ರೂಮಿಗೆ ಬೀಗ ಹಾಕಿ ಊರಿಗೆ ಹೋಗಿದ್ದರು. ಮರುದಿನ ಬೆಳಗ್ಗೆ 9ಗಂಟೆಗೆ ನೆರೆಮನೆಯ ಲಕ್ಷ್ಮೀಶ ಎಂಬವರು ಕರೆ ಮಾಡಿ ರೂಮಿನ ಬಾಗಿಲಿಗೆ ಹಾಕಲಾದ ಬೀಗವನ್ನು ಒಡೆದು ಹಾಕಿರುವ ಬಗ್ಗೆ ತಿಳಿಸಿದ್ದರು. ಬಳಿಕ ಕೋಣೆ ಪರಿಶೀಲಿಸಿದಾಗ 25,000 ರೂ. ಬೆಲೆಯ ಲ್ಯಾಪ್‌ಟಾಪ್ ಕಳವಾಗಿರುವುದು ಕಂಡು ಬಂದಿದೆ.
ಅ.28ರಂದು ಕಾರ್ತಿಕೇಯ ಭಟ್ ರೂಮಿಗೆ ಬಂದು ನೋಡಿದಾಗ ತನ್ನ ಮತ್ತು ಪಕ್ಕದ ರೂಮಿನ ಪವನ್ ಎಂಬಾತನ 10,000 ರೂ. ಮೌಲ್ಯದ ಲ್ಯಾಪ್‌ಟಾಪ್ ಕಳವಾಗಿರುವುದು ಖಚಿತವಾಗಿದೆ.
Next Story





