ದಕ್ಷಿಣ ಕೊರಿಯ: ಹೆಲಿಕಾಪ್ಟರ್ ಪತನ; ಎಲ್ಲ 7 ಮಂದಿ ಸಾವು?
ಸಿಯೋಲ್ (ದಕ್ಷಿಣ ಕೊರಿಯ), ನ. 1: ದಕ್ಷಿಣ ಕೊರಿಯದ ವಿವಾದಾಸ್ಪದ ಡೋಕ್ಡೊ ದ್ವೀಪ ಸಮೂಹಗಳ ಸಮೀಪ ಸಮುದ್ರದಲ್ಲಿ ಗುರುವಾರ ರಾತ್ರಿ ಏರ್ಬಸ್ ಹೆಲಿಕಾಪ್ಟರೊಂದು ಪತನಗೊಂಡಿದೆ.
ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದ ಏಳು ಮಂದಿಯ ಪೈಕಿ ಯಾರೂ ಬದುಕುಳಿದಿರುವ ಲಕ್ಷಣಗಳು ಕಂಡುಬಂದಿಲ್ಲ ಎಂದು ದಕ್ಷಿಣ ಕೊರಿಯದ ರಕ್ಷಣಾ ಸೇವೆಗಳ ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಕೊರಿಯ ಅಗ್ನಿಶಾಮಕ ಇಲಾಖೆ ನಿರ್ವಹಿಸುತ್ತಿರುವ ಏರ್ಬಸ್ ಎಚ್225 ಸೂಪರ್ ಪ್ಯೂಮಾ ಹೆಲಿಕಾಪ್ಟರ್, ಗಾಯಗೊಂಡ ನಾವಿಕನೊಬ್ಬನನ್ನು ಆಸ್ಪತ್ರೆಗೆ ಒಯ್ಯುತ್ತಿದ್ದಾಗ ಪತನಗೊಂಡಿದೆ. ಡೋಕ್ಡೊದಿಂದ ಹಾರಾಟ ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ ಅದು ಸಮುದ್ರಕ್ಕೆ ಅಪ್ಪಳಿಸಿತು.
Next Story