ಬೋಪಣ್ಣ-ಶಪೊವಾಲೋವ್ ಕ್ವಾರ್ಟರ್ ಫೈನಲ್‌ಗೆ
ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿ

ಪ್ಯಾರಿಸ್, ನ.1: ಭಾರತದ ಅಗ್ರಮಾನ್ಯ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ತನ್ನ ಕೆನಡಾದ ಜೊತೆಗಾರ ಡೆನಿಸ್ ಶಪೊವಾಲೋವ್ ಜೊತೆಗೂಡಿ ಇಲ್ಲಿ ನಡೆಯುತ್ತಿರುವ ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಇಲ್ಲಿ ಗುರುವಾರ ಸಾಯಂಕಾಲ ನಡೆದ ಪುರುಷರ ಡಬಲ್ಸ್‌ನ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಬೋಪಣ್ಣ-ಶಪೊವಾಲೋವ್ ಅಮೆರಿಕ-ಅರ್ಜೆಂಟೀನದ ಜೋಡಿ ಮ್ಯಾನುಯೆಲ್ ಗೊಂಝಾಲೆಝ್ ಹಾಗೂ ಅಸ್ಟಿನ್ ಕ್ರಾಜಿಸೆಕ್‌ರನ್ನು 6-1, 6-3 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು. ಇದಕ್ಕೂ ಮೊದಲು ಬೆನೊಟ್ ಪೈರ್ ಹಾಗೂ ಫೆರ್ನಾಂಡೊ ವೆರ್ಡಾಸ್ಕೊರನ್ನು 6-4, 7-5 ಸೆಟ್‌ಗಳ ಅಂತರದಿಂದ ಮಣಿಸಿದ ಬೋಪಣ್ಣ ಹಾಗೂ ಶಪೊವಾಲೋವ್ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದರು.
ಬೋಪಣ್ಣ ಹಾಗೂ ಶಪೊವಾಲೋವ್ ಮುಂದಿನ ಸುತ್ತಿನಲ್ಲಿ ರಶ್ಯದ ಜೋಡಿ ಕರೆನ್ ಖಚನೊವ್ ಹಾಗೂ ಅಂಡ್ರೆ ರುಬ್ಲೋವ್‌ರನ್ನು ಎದುರಿಸಲಿದ್ದಾರೆ.
Next Story





