ಮಂಗಳೂರು ಮನಪಾ ಚುನಾವಣೆ: 191 ನಾಮಪತ್ರಗಳು ಕ್ರಮಬದ್ಧ
ಮಂಗಳೂರು, ನ.2: ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್ಗಳಿಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಸಲ್ಲಿಕೆಯಾಗಿದ್ದ 236 ನಾಮಪತ್ರಗಳ ಪೈಕಿ 32 ನಾಮಪತ್ರಗಳು ತಿರಸ್ಕೃತಗೊಂಡಿವೆ. ಶನಿವಾರ ನಾಮಪತ್ರವನ್ನು ಪರಿಶೀಲಿಸಲಾಗಿದ್ದು, 191 ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ನ.12ರಂದು ಚುನಾವಣೆ ನಡೆಯಲಿದೆ. ನ.4ರಂದು ನಾಮಪತ್ರ ವಾಪಸ್ಗೆ ಕೊನೆಯ ದಿನವಾಗಿದೆ.
Next Story