ಪುತ್ತೂರು: ವಲ್ಲಭ ಭಾಯ್ ಪಟೇಲ್ ಏಕತಾ ಓಟ

ಪುತ್ತೂರು, ನ.3: ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ 144ನೇ ಜನ್ಮದಿನದ ಅಂಗವಾಗಿ ದೇಶಾದ್ಯಂತ ಏಕತಾ ದಿನ ಆಚರಿಸಲಾಗುತ್ತಿದ್ದು, ಅದರ ಸಂಕೇತವಾಗಿ ಏಕತಾ ಓಟವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಪುತ್ತೂರು ಬಿಜೆಪಿ ಮಂಡಲದ ವತಿಯಿಂದಲೂ ಏಕತಾ ದಿವಸ್ ಕಾರ್ಯಕ್ರಮ ಆಯೋಜಿಸಲಾಯಿತು. ರವಿವಾರ ಬೆಳಗ್ಗೆ ನಗರದ ದರ್ಬೆಯಿಂದ ಪುತ್ತೂರು ಬಿಜೆಪಿ ಕಚೇರಿ ತನಕ ಏಕತಾ ಓಟ ನಡೆಯಿತು.
ಆರೋಗ್ಯ ಕಾಪಾಡುವ ಏಕತೆಯ ಸಂದೇಶ:
ಏಕತಾ ಓಟಕ್ಕೆ ಚಾಲನೆ ನೀಡಿದ ಶಾಸಕ ಸಂಜೀವ ಮಠಂದೂರು ಬಳಿಕ ಮಾತನಾಡಿ, ಆರೋಗ್ಯ ಕಾಪಾಡುವ ದೃಷ್ಟಿಯಿಂದ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಮತ್ತು ಏಕತಾ ಸಂದೇಶ ನೀಡುವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಸ್ಮರಣೆಯ ಮೂಲಕ ಏಕತಾ ಓಟದಲ್ಲಿ ಯುವಜನತೆ ಪಾಲ್ಗೊಳ್ಳಬೇಕು ಎಂದರು.
ಬಿಜೆಪಿ ಮಂಗಳೂರು ವಿಬಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲದ ಅಧ್ಯಕ್ಷ ಜೀವಂಧರ್ ಜೈನ್, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಹಾರಾಡಿ, ಗೌರಿ ಬನ್ನೂರು, ಶಂಭು ಭಟ್, ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿಯ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸಹಿತ ಹಲವಾರು ಓಟದಲ್ಲಿ ಭಾಗವಹಿಸಿದ್ದರು.








