ಮಂಗಳೂರು: ‘ಬ್ಯಾರೀಸ್ ಕಪ್’ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಚಾಲನೆ

ಮಂಗಳೂರು, ನ.3: ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೋಟರ್ಸ್ ವತಿಯಿಂದ ನಗರದ ಯುಎಸ್ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಕ್ರೀಡಾಕೂಟ ‘ಬ್ಯಾರೀಸ್ ಕಪ್’ಗೆ ರವಿವಾರ ಚಾಲನೆ ನೀಡಲಾಯಿತು.
ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್ ಉದ್ಘಾಟಿಸಿದರು. ‘ಆ್ಯಪಲ್ ಮಾರ್ಟ್’ ಇದರ ನಿರ್ದೇಶಕ ಪಿ.ಎಸ್. ಮುಹಮ್ಮದ್ ಹನೀಫ್, ಪೀಸ್ ಗ್ರೂಪ್ ಇದರ ಆಡಳಿತ ನಿರ್ದೇಶಕ ಪಿಸಿ ಹಾಶಿರ್, ಮಾಜಿ ಕ್ರೀಡಾಪಟು ಅಶೋಕ್ ಪೂವಯ್ಯ, ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಅಧ್ಯಕ್ಷ ಸಿಎಸ್ ಭಂಡಾರಿ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಜಿ4 ನಿರ್ದೇಶಕ ಅಬೂಬಕರ್ ಸಿದ್ದೀಕ್, ಉದ್ಯಮಿ ರಫೀಕ್ ಪೋಕ, ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೋಟರ್ಸ್ ಅಧ್ಯಕ್ಷ ನೂರ್ ಮುಹಮ್ಮದ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.
















