ನ. 10: ಗೂನಡ್ಕ ಮೀಲಾದ್ ಸ್ನೇಹ ಸಂಗಮ

ಗೂನಡ್ಕ: ಅಲ್ ಅಮೀನ್ ವೆಲ್ಫೇರ್ ಎಸೋಸಿಯೇಶನ್ ಗೂನಡ್ಕ ವತಿಯಿಂದ ಮೀಲಾದ್ ಪ್ರಯುಕ್ತ ವೈವಿಧ್ಯ ಕಾರ್ಯಕ್ರಮಗಳು ಬದ್ರಿಯಾ ಜುಮಾ ಮಸೀದಿ ವಠಾರ ಗೂನಡ್ಕದಲ್ಲಿ ನಡೆಯಲಿದೆ.
ನ. 9 ರಂದು ಸಂಜೆ 3ಕ್ಕೆ ಮದ್ರಸ ವಿದ್ಯಾರ್ಥಿಗಳ ಮೀಲಾದ್ ಫೆಸ್ಟ್ ನಡೆಯಲಿದೆ. ನ. 10ರಂದು ಬೆಳಗ್ಗೆ 10ಕ್ಕೆ ಸರ್ವ ಧರ್ಮೀಯರ ಮೀಲಾದ್ ಸ್ನೇಹ ಸಂಗಮ ಆಯೋಜಿಸಲಾಗಿದೆ. ರಾಜರಾಮ ಕೀಲಾರ್ ಅಧ್ಯಕ್ಷತೆ ವಹಿಸುವರು, ಎಂ ಬಿ ಸದಾಶಿವ ಉದ್ಘಾಟಿಸಲಿದ್ದಾರೆ. ಹರೀಶ್ ಕಂಜಿಪಿಲಿ, ವೆಂಕಪ್ಪ ಗೌಡ, ರೆ. ಫಾ ನವೀನ್ ಪ್ರಕಾಶ್ ಪಿಂಟೋ ಹಾಗು ಇತರ ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ, ಸಹಾಯ ಧನ ವಿತರಣೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಕುಂಞಿ ಗೂನಡ್ಕ ತಿಳಿಸಿದ್ದಾರೆ
Next Story





