Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಸೀತಾಫಲದ ಕುರಿತು ಈ ಮಿಥ್ಯೆಗಳ ಹಿಂದಿನ...

ಸೀತಾಫಲದ ಕುರಿತು ಈ ಮಿಥ್ಯೆಗಳ ಹಿಂದಿನ ಸತ್ಯ ನಿಮಗೆ ತಿಳಿದಿರಲಿ

ವಾರ್ತಾಭಾರತಿವಾರ್ತಾಭಾರತಿ3 Nov 2019 8:20 PM IST
share
ಸೀತಾಫಲದ ಕುರಿತು ಈ ಮಿಥ್ಯೆಗಳ ಹಿಂದಿನ ಸತ್ಯ ನಿಮಗೆ ತಿಳಿದಿರಲಿ

ಸೀತಾಫಲ ರುಚಿಕರ ಹಣ್ಣಾಗಿದ್ದು,ಎಲ್ಲರೂ ಅದನ್ನು ಇಷ್ಟಪಡುತ್ತಾರೆ. ಪೋಷಕಾಂಶಗಳ ಆಗರವಾಗಿರುವ ಈ ಹಣ್ಣು ಡೇರಿ ಉತ್ಪನ್ನಗಳಿಗೆ ಅತ್ಯುತ್ತಮ ಪರ್ಯಾಯವಾಗಿದೆ ಮತ್ತು ಲ್ಯಾಕ್ಟೋಸ್ ಅಸಹಿಷ್ಣುತೆಯುಳ್ಳವರು ಇದನ್ನು ಧಾರಾಳವಾಗಿ ಸೇವಿಸಬಹುದು.ಆದರೆ ಸವಿಯಾದ ಸೀತಾಫಲದ ಕುರಿತು ಕೆಲವು ಮಿಥ್ಯೆಗಳಿದ್ದು,ಇದರಿಂದಾಗಿ ಕೆಲವರು ಇದನ್ನು ತಿನ್ನಲು ಬಯಸುವುದಿಲ್ಲ. ಈ ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು ಇಲ್ಲಿವೆ......

►ಮಧುಮೇಹಿಗಳು ಸೀತಾಫಲವನ್ನು ತಿನ್ನಬಾರದು

-ಗ್ಲೈಸೆಮಿಕ್ ಇಂಡೆಕ್ಸ್ ರಕ್ತದಲ್ಲಿಯ ಸಕ್ಕರೆ ಮಟ್ಟದ ಮೇಲೆ ಕಾರ್ಬೊಹೈಡ್ರೇಟ್‌ಗಳ ಪರಿಣಾಮವನ್ನು ಅಳೆಯುವ ಮಾಪನವಾಗಿದೆ. ಸೀತಾಫಲವು ಕಡಿಮೆ ಗೈಸೆಮಿಕ್ ಸೂಚ್ಯಂಕ (54)ವನ್ನು ಹೊಂದಿದೆ. ಅದು ಸುರಕ್ಷಿತ ಆಹಾರ ಮಾತ್ರವಲ್ಲ, 55ಕ್ಕೂ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುವುದರಿಂದ ಮಧುಮೇಹಿಗಳು ಅದನ್ನು ಆರಾಮವಾಗಿ ತಿನ್ನಬಹುದು.

►ದಪ್ಪಗಿದ್ದವರು ಸೀತಾಫಲ ತಿನ್ನಬಾರದು

-ಸೀತಾಫಲವು ವಿಟಾಮಿನ್ ಬಿ ಕಾಂಪ್ಲೆಕ್ಸ್‌ನ,ವಿಶೇಷವಾಗಿ ಬಿ6 ವಿಟಾಮಿನ್ ‌ನ ಅತ್ಯುತ್ತಮ ಮೂಲವಾಗಿದೆ. ಬಿ6 ವಿಟಾಮಿನ್ ವಾಯು ಸಮಸ್ಯೆಯನ್ನು ತಗ್ಗಿಸುತ್ತದೆ. ಸೀತಾಫಲಕ್ಕೂ ತೂಕ ಏರಿಕೆ ಅಥವಾ ಬೊಜ್ಜಿಗೂ ಯಾವುದೇ ಸಂಬಂಧವಿಲ್ಲ

►ಸೀತಾಫಲ ಹೃದ್ರೋಗಿಗಳಿಗೆ ಹಾನಿಕಾರಕ

-ಸೀತಾಫಲದಲ್ಲಿ ಮ್ಯಾಗ್ನೀಷಿಯಂ,ಪೊಟ್ಯಾಷಿಯಮ್‌ನಂತಹ ಖನಿಜಗಳು ಮತ್ತು ವಿಟಾಮಿನ್ ಸಿ ಹೇರಳವಾಗಿದ್ದು,ಇವು ಹೃದಯ ಮತ್ತು ಹೃದಯನಾಳೀಯ ವ್ಯವಸ್ಥೆಯ ಮೇಲೆ ವಯಸ್ಸಾಗುವಿಕೆಯ ಪರಿಣಾಮಗಳನ್ನು ತಡೆಯುತ್ತವೆ. ಸೀತಾಫಲವು ಹೃದಯವನ್ನು ಆರೋಗ್ಯಯುತವಾಗಿರಿಸುವ ಜೊತೆಗೆ ಹಲವಾರು ರೋಗಗಳನ್ನು ದೂರವಿರಿಸಲು ನೆರವಾಗುತ್ತದೆ.

►ಪಿಸಿಒಡಿಯಿಂದ ಬಳಲುತ್ತಿರುವವರು ಸೀತಾಫಲದಿಂದ ದೂರವಿರಬೇಕು

 - ಪಾಲಿಸಿಸ್ಟಿಕ್ ಓವರಿ ಡಿಸೀಸ್ ಅಥವಾ ಪಿಸಿಒಡಿ ಹದಿಹರೆಯದ ಹೆಣ್ಣುಮಕ್ಕಳನ್ನು ಕಾಡುವ ವಿಪರೀತ ರಕ್ತಸ್ರಾವದ ಸಮಸ್ಯೆಯಾಗಿದೆ. ಸೀತಾಫಲವು ಕಬ್ಬಿಣದ ಉತ್ತಮ ಮೂಲವಾಗಿದೆ. ಕಬ್ಬಿಣ ಬಳಲಿಕೆ ಮತ್ತು ಮನಸ್ಸಿಗೆ ಕಿರಿಕಿರಿಯ ವಿರುದ್ಧ ಹೋರಾಡುವ ಜೊತೆಗೆ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಸೀತಾಫಲಕ್ಕೆ ಪಿಸಿಒಡಿ ಅಥವಾ ಇತರ ಯಾವುದೇ ಸ್ಥಿತಿಯೊಂದಿಗೆ ಸಂಬಂಧವಿಲ್ಲ. ರಕ್ತಸ್ರಾವದ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ಬಹಳಷ್ಟು ಮಹಿಳೆಯರು ಸೀತಾಫಲವನ್ನು ತಿನ್ನುವುದಿಲ್ಲ,ಆದರೆ ಇದು ಸಂಪೂರ್ಣ ತಪ್ಪುಗ್ರಹಿಕೆಯಾಗಿದೆ.

ಆರೋಗ್ಯವೇ ಭಾಗ್ಯ. ಹಣ್ಣುಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ನಾವು ಆಧಾರರಹಿತ ಕಾರಣಗಳನ್ನು ನಂಬಿ ಹಣ್ಣುಗಳನ್ನು ತಿನ್ನುವುದನ್ನು ನಿಲ್ಲಿಸಬಾರದು. ಸೀತಾಫಲ ಆರೋಗ್ಯಕ್ಕೆ ತುಂಬ ಒಳ್ಳೆಯದು,ಹೀಗಾಗಿ ಯಾವುದೇ ಚಿಂತೆಯಿಲ್ಲದೆ ಅದನ್ನು ಸೇವಿಸಿಬಹುದು.

►ಸೀತಾಫಲದ ಕೆಲವು ಅದ್ಭುತ ಆರೋಗ್ಯಲಾಭಗಳು

ಸೀತಾಫಲದ ಸೇವನೆಯು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ,ಹೊಟ್ಟೆ ಉಬ್ಬರಿಸುವುದನ್ನು ಕಡಿಮೆ ಮಾಡುತ್ತದೆ. ವಾಯು,ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ಜಠರದ ಹುಣ್ಣುಗಳಿಂದ ಮುಕ್ತಿಯನ್ನು ನೀಡುತ್ತದೆ. ಅದರಲ್ಲಿಯ ಜೈವಿಕ ಸಕ್ರಿಯ ಅಣುಗಳು ಬೊಜ್ಜು,ಮಧುಮೇಹ ಮತ್ತು ಕ್ಯಾನ್ಸರ್‌ನ ವಿರುದ್ಧ ರಕ್ಷಣೆಯನ್ನು ನೀಡುತ್ತವೆ. ಅದು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ,ತಲೆಗೂದನ್ನು ಬಲಗೊಳಿಸುತ್ತದೆ,ಕಣ್ಣಿನ ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ. ಮಿದುಳಿನ ಆರೋಗ್ಯಕ್ಕೆ ಒಳ್ಳೆಯದು,ಜೊತೆಗೆ ಹಿಮೋಗ್ಲೋಬಿನ್ ಮಟ್ಟಗಳನ್ನು ಹೆಚ್ಚಿಸುತ್ತದೆ. ಎಲ್ಲ ವಯೋಮಾನದವರು ಈ ಹಣ್ಣನ್ನು ಸೇವಿಸಬಹುದಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X