ಯಕ್ಷಗಾನ ಕಲಾರಂಗದಿಂದ ವಿದ್ಯಾರ್ಥಿಯ ಮನೆ ಹಸ್ತಾಂತರ

ಉಡುಪಿ, ನ.3: ಯಕ್ಷಗಾನ ಕಲಾರಂಗದ ವತಿಯಿಂದ ಉದ್ಯಾವರದಲ್ಲಿ ವಿದ್ಯಾಪೋಷಕ್ ವಿದ್ಯಾರ್ಥಿಗೆ ಸುಮಾರು 5ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಮನೆಯ ಹಸ್ತಾಂತರ ಕಾಯರ್ಕ್ರಮ ನ.2ರಂದು ಜರಗಿತು.
ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿ ವಿಶ್ವನಾಥ ಅವರ ನೂತನ ಮನೆಯನ್ನು ಬೆಂಗಳೂರಿನ ಟೆಕ್ಸೆಲ್ ಅಟೋಮೋಶನ್ ಸಂಸ್ಥೆಯ ಸಂಸ್ಥಾಪಕ ಹರೀಶ್ ರಾಯಸ್ ಉದ್ಘಾಟಿಸಿ, ಕಡಿಮೆ ಖರ್ಚಿನಲ್ಲಿ ಸುಂದರವಾದ ಮನೆ ನಿರ್ಮಿಸಿದ ಸಂಸ್ಥೆಯನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ರೂಪಾ ಹರೀಶ್ ರಾಯಸ್, ದಾನಿಗಳಾದ ತಲ್ಲೂರು ಶಿವರಾಮ ಶೆಟ್ಟಿ, ಯು.ವಿಶ್ವನಾಥ ಶೆಣೈ, ಸೂರ್ಯಪ್ರಕಾಶ್, ಆನಂದ ಪಿ.ಸುವರ್ಣ, ಮಂಟಪ ನಟರಾಜ್ ಉಪಾಧ್ಯ, ಹುಬ್ಬಳ್ಳಿಯ ಮೈ ಲೈಪ್‌ನ ಪ್ರವೀಣ್ ಗುಡಿ, ಉಪಾಧ್ಯಕ್ಷ ಎಂ.ಗಂಗಾಧರ ರಾವ್, ಕಡೆಕಾರ್ ಗ್ರಾಪಂ ಸದಸ್ಯ ರಾಘವೇಂದ್ರ, ನಾರಾಯಣ ಮೇಸ್ತ್ರಿ ಉಪಸ್ಥಿತರಿದ್ದರು.
ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ತಾಯಿ ಮಾಲತಿ ಕೃತಜ್ಞತೆ ಸಲ್ಲಿಸಿದರು. ಜತೆ ಕಾರ್ಯದಶಿರ್ ನಾರಾಯಣ ಎಂ.ಹೆಗಡೆ ವಂದಿಸಿದರು.





