ಗಾಂಜಾ ಮಾರಾಟ ಯತ್ನ : ಓರ್ವ ಬಂಧನ

ಉಡುಪಿ : ಇಂದ್ರಾಳಿ ರೈಲ್ವೆ ನಿಲ್ದಾಣ, ರೈಲ್ವೆ ಗೋಡಾನ್ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತಿದ್ದ ಯುವಕನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ನಿವಾಸಿ ಪವನ್ ಯಾದವ್ (26) ಬಂಧಿತ ಅರೋಪಿ.
ಆರೋಪಿಯಿಂದ 20 ಸಾವಿರ ರೂ., ಮೌಲ್ಯದ 750 ಗ್ರಾಂ ಗಾಂಜಾ, ಮೂರು ಸಾವಿರ ರೂ., ನಗದು, ದ್ವೀಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





