Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಯಶಸ್ವಿ ರಾಜಕಾರಣಿ ದೇವರು-ಧರ್ಮಕ್ಕೆ...

ಯಶಸ್ವಿ ರಾಜಕಾರಣಿ ದೇವರು-ಧರ್ಮಕ್ಕೆ ಹೆದರುವಂತಿಲ್ಲ: ಪೇಜಾವರ ಶ್ರೀ

ವಾರ್ತಾಭಾರತಿವಾರ್ತಾಭಾರತಿ3 Nov 2019 11:39 PM IST
share
ಯಶಸ್ವಿ ರಾಜಕಾರಣಿ ದೇವರು-ಧರ್ಮಕ್ಕೆ ಹೆದರುವಂತಿಲ್ಲ: ಪೇಜಾವರ ಶ್ರೀ

ಬೆಂಗಳೂರು, ನ.3: ಯಶಸ್ವಿ ರಾಜಕಾರಣಿಯಾಗಿದ್ದರೆ ದೇವರು ಮತ್ತು ಧರ್ಮಕ್ಕೆ ಹೆದರುವಂತಿಲ್ಲ ಎಂದು ಉಡುಪಿ ಮಠದ ಪೀಠಾಧ್ಯಕ್ಷ ವಿಶ್ವೇಶ್ವರತೀರ್ಥ ಸ್ವಾಮೀಜಿ ಹೇಳಿದ್ದಾರೆ.

ರವಿವಾರ ನಗರದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸಭಾಂಗಣದಲ್ಲಿ ವಸಂತ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಜಿ.ಎನ್.ರಂಗನಾಥರಾವ್ ಕನ್ನಡಕ್ಕೆ ಅನುವಾದಿಸಿರುವ ಪ್ರೊ.ಎಲ್.ಎಸ್.ಶೇಷಗಿರಿರಾವ್ ಅವರ ಮಹಾಭಾರತ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜೀವನದಲ್ಲಿ ಪ್ರತಿನಿತ್ಯ ಒಂದಲ್ಲಾ, ಒಂದು ವಿಷಯಕ್ಕೆ ಸಂಬಂಧಿಸಿದಂತೆ ನಿರಂತರ ಹೋರಾಟವಿರುತ್ತದೆ. ಆದರೆ, ಯಾವುದಕ್ಕೂ ಹೆದರಬಾರದು ಎಂದ ಅವರು, ದೇವಸ್ಥಾನ, ಮಸೀದಿ, ಚರ್ಚ್ ಎಲ್ಲಿಯಾದರೂ ಹೋಗಲಿ. ಆದರೆ, ಅಲ್ಲಿಗೆ ಭಕ್ತಿಯಿಂದ ಹೋಗಬೇಕು, ವಿನಹಃ ಪ್ರದರ್ಶನಕ್ಕಾಗಿ ಹೋಗಬಾರದು ಎಂದು ಸ್ವಾಮೀಜಿ ತಿಳಿಸಿದರು.

ಮಹಾಭಾರತದಲ್ಲಿ ಸಂಸ್ಕೃತಿ, ರಾಜಕೀಯ, ತತ್ವಜ್ಞಾನ, ಅರ್ಥಶಾಸ್ತ್ರ ಸೇರಿದಂತೆ ಎಲ್ಲವೂ ಅಡಗಿದ್ದು, ಅದೊಂದು ಮಹೋನ್ನತ ಗ್ರಂಥವಾಗಿದೆ. ಮಹಾಭಾರತವು ಪಾಂಡವರು ಹಾಗೂ ಕೌರವರ ನಡುವಿನ ಯುದ್ಧವಾಗಿದೆ. ಆದರೆ, ಅದರಲ್ಲಿ ಹಲವಾರು ಅಂಶಗಳನ್ನು ನಾವು ಕಲಿಯುವುದು ಇದೆ. ಧರ್ಮ ರಕ್ಷಣೆಯ ಪಾಠವಿದೆ ಎಂದು ಅವರು ನುಡಿದರು.

ಯುದ್ದ ನಡೆದರೆ ಪಾಂಡವರು ಗೆಲ್ಲುತ್ತಾರೆ. ಆದರೆ, ಪಟ್ಟಾಭಿಷೇಕ ದುರ್ಯೋಧನಗೆ ನಡೆಯುತ್ತದೆ. ಇಂದಿನ ಸಂದರ್ಭದಲ್ಲಿಯೋ ಅಂತಹುದೇ ನಡೆಯುತ್ತಿದೆ ಎಂದ ಅವರು, ಮಹಾಭಾರತದಿಂದ ಲೇಖಕರು, ಚಿಂತಕರು, ರಾಜಕಾರಣಿಗಳು, ಪಂಡಿತರು ಸೇರಿದಂತೆ ಎಲ್ಲರೂ ತಿಳಿದುಕೊಳ್ಳಬೇಕಾದ ಅನೇಕ ಅಂಶಗಳು ಇವೆ ಎಂದು ಅವರು ವಿವರಿಸಿದರು.

ವಿದ್ವಾಂಸ ಡಾ.ಶತಾವಧಾನಿ ಆರ್.ಗಣೇಶ್ ಮಾತನಾಡಿ, ಮಹಾಭಾರತದ ಕುರಿತು ಎಷ್ಟು ಬರೆದರೂ ಸಾಲದು, ಇನ್ನೂ ಬರೆಯುವಂತಹದ್ದು ಇದ್ದೇ ಇರುತ್ತದೆ. ನಮ್ಮ ಬದುಕಿನ ಕಥೆ ಮಹಾಭಾರತದ ಕಥೆಯಾಗಿದೆ ಎಂದು ಹೇಳಿದರು.

ಮಹಾಭಾರತದಲ್ಲಿನ ವಿಧುರ ಎಲ್ಲರಿಗೂ ದೊಡ್ಡ ಆದರ್ಶ ವ್ಯಕ್ತಿಯಾಗಿದ್ದಾನೆ. ಕೃಷ್ಣನಂತೆ ಎಲ್ಲವನ್ನೂ ಸಾಧಿಸಿಕೊಡಬಲ್ಲವರು ವಿರಳ ಎಂದ ಅವರು, ಕೆಡುಕಿನ ನಡುವೆ ಒಳ್ಳೆಯವರು ಇರುತ್ತಾರೆ. ಮಹಾಭಾರತ ನೇರ ಕಥೆಯಾಗಿ ನೋಡುವ ಅಭ್ಯಾಸವಿದೆ. ಆದರೆ, ಉಪ ಕಥೆಗಳಲ್ಲಿ ಸಿಗುವ ಜೀವನ ಮೌಲ್ಯ ಮುಖ್ಯ ಕಥೆಯಲ್ಲಿ ಸಿಗದಿರಬಹುದು ಎಂದು ತಿಳಿಸಿದರು.

ಕನ್ನಡದ ಕೃತಿಗಳಿಗೆ ಸಮರ್ಥಕವಾದ ಅನುವಾದಕರು ಸಿಗದೇ ಇರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲುಪಲಾಗುತ್ತಿಲ್ಲ. ಜನಕ್ಕೆ ಓದುವ ತಾಳ್ಮೆಯಿದ್ದು, ಒಳ್ಳೆಯ ಕೃತಿಗಳು ಸಿಕ್ಕಿದರೆ ಖಂಡಿತ ಓದುತ್ತಾರೆ. ಅನುವಾದ ಉತ್ತಮವಾಗಿದೆ. ಮೂಲಕೃತಿಯ ಸಾರವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್, ಅನುವಾದಕ ಜಿ.ಎನ್.ರಂಗನಾಥರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X