ಟಿ-20 ಕ್ರಿಕೆಟ್‌ಗೆ ಕಾಲಿಟ್ಟ ಶಿವಂ ದುಬೆ

ಹೊಸದಿಲ್ಲಿ, ನ.3: ಆಲ್‌ರೌಂಡರ್ ಶಿವಂ ದುಬೆ ಬಾಂಗ್ಲಾದೇಶ ವಿರುದ್ಧ ರವಿವಾರ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಆಡುವುದರೊಂದಿಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದಾರೆ.
ದುಬೆ ಭಾರತದ ಪರ ಟ್ವೆಂಟಿ-20 ಪಂದ್ಯವನ್ನಾಡಿದ 82ನೇ ಆಟಗಾರ ಎನಿಸಿಕೊಂಡರು. ಟಾಸ್‌ಗಿಂತ ಮೊದಲು ನಾಯಕ ರೋಹಿತ್ ಶರ್ಮಾ ಅವರು ದುಬೆಗೆ ಟಿ-20 ಕ್ಯಾಪ್ ನೀಡಿದರು. ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯರ ಬದಲಿಗೆ ಟ್ವೆಂಟಿ-20 ಸರಣಿಯಲ್ಲಿ ದುಬೆ ಆಯ್ಕೆಯಾಗಿದ್ದಾರೆ.
ಮುಂಬೈ ಆಲ್‌ರೌಂಡರ್ ದುಬೆ ರಣಜಿ ಟ್ರೋಫಿ ಹಾಗೂ ಮುಂಬೈ ಪ್ರೀಮಿಯರ್ ಲೀಗ್‌ನಲ್ಲಿ ಎರಡು ಬಾರಿ ಓವರ್‌ವೊಂದರಲ್ಲಿ ಐದು ಸಿಕ್ಸರ್‌ಗಳನ್ನು ಸಿಡಿಸಿದ್ದರು. 2019ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಪ್ರತಿನಿಧಿಸಿದ್ದರು. ಇತ್ತೀಚೆಗೆ ವಿಜಯ ಹಝಾರೆ ಟ್ರೋಫಿಯಲ್ಲಿ ಕರ್ನಾಟಕದ ವಿರುದ್ಧ ಕೇವಲ 57 ಎಸೆತಗಳಲ್ಲಿ 118 ರನ್ ಗಳಿಸಿ ಗಮನ ಸೆಳೆದಿದ್ದರು.
Next Story





