ಆಜ್ತಕ್ ವೇದಿಕೆಯಲ್ಲೇ ಆ ಚಾನಲ್ ನ ಧೋರಣೆಯನ್ನು ಟೀಕಿಸಿದ ವರುಣ್ ಗ್ರೋವರ್

ಹೊಸದಿಲ್ಲಿ: ಖ್ಯಾತ ಲೇಖಕ ಮತ್ತು ಗೀತರಚನೆಗಾರ ವರುಣ್ ಗ್ರೋವರ್ ಇತ್ತೀಚೆಗೆ ಆಜ್ತಕ್ ಟಿವಿ ಚಾನಲ್ ಆಯೋಜಿಸಿದ್ದ ಸಾಹಿತ್ಯ ಆಜ್ತಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಮ್ಮ ಕೃತಿಗಳು ಹಾಗೂ ದೇಶದ ಪ್ರಸ್ತುತ ರಾಜಕೀಯ ಸ್ಥಿತಿಗತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದರು. ಆದರೆ ಚಾನಲ್ ವಾಸ್ತವವಾಗಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದು ಗ್ರೋವರ್ ಟೀಕಿಸಿರುವುದು ಸಾಮಾಜಿಕ ಜಾಲತಾಣಿಗರ ಗಮನ ಸೆಳೆದಿದೆ.
ಈ ಹಿಂದಿ ವಾಹಿನಿ ಪ್ರಸಾರ ಮಾಡಿದ ಕೊನೆಯ 200 ಚರ್ಚೆಗಳ ವಿಷಯಗಳನ್ನು ಗ್ರೋವರ್ ಪ್ರಸ್ತುತಪಡಿಸಿ, ಬಿಹಾರ ಪ್ರವಾಹ ವಿಚಾರವಾಗಿ ಕೇವಲ ಮೂರು ಚರ್ಚೆಗಳು ನಡೆದಿದ್ದರೆ, ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್ ಬಿಕ್ಕಟ್ಟನ್ನು ಒಂದು ಬಾರಿ ಚರ್ಚಿಸಲಾಗಿದೆ. ನಿರುದ್ಯೋಗದ ಬಗ್ಗೆ ಚರ್ಚೆಯೇ ನಡೆದಿಲ್ಲ. ಅದಾಗ್ಯೂ ಅಯೋಧ್ಯೆ ರಾಮಮಂದಿರ ವಿಚಾರ 14 ಬಾರಿ ಚರ್ಚೆಯಾಗಿದ್ದು, 80 ಚರ್ಚೆಗಳು ಪಾಕಿಸ್ತಾನ ಕೇಂದ್ರಿತವಾಗಿತ್ತು ಎಂದು ವಿವರ ನೀಡಿದರು.
"ನಮ್ಮ ಟಿವಿಗಳಲ್ಲಿ ಪಾಕಿಸ್ತಾನದ ಬಗೆಗಿನ ಚರ್ಚೆ ಅಗತ್ಯವಿಲ್ಲ. ಪಾಕಿಸ್ತಾನ ನಾವು ಚರ್ಚೆ ಮಾಡಲು ಅರ್ಹ ದೇಶವೇ ಅಲ್ಲ. ನನ್ನ ನಂಬಿಕೆಯಂತೆ ಪಾಕಿಸ್ತಾನ ಇಲ್ಲಿ ವಾಸ್ತವವಾಗಿ ಸಮಸ್ಯೆಯೇ ಅಲ್ಲ; ಈ ವಿಷಯ ನಿರಂತರವಾಗಿ ಚರ್ಚಿಸುವ ಎಲ್ಲ ವಾಹಿನಿಗಳ ಹಿತಾಸಕ್ತಿ ಬೇರೆಯೇ ಇದೆ" ಎಂದು ಗ್ರೋವರ್ ಟೀಕಿಸಿದರು.
बदल तो रहा है नर्मदा का पानी... @varungrover #varungrover #aajtak https://t.co/jTUGNXrIIq
— Shubham Singh (@Shubham72600076) November 4, 2019