ಮಹಾರಾಷ್ಟ್ರದಲ್ಲಿ ಶೀಘ್ರ ಹೊಸ ಸರಕಾರ ರಚನೆ: ಫಡ್ನವೀಸ್

ಮುಂಬೈ, ನ.4: ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ದಿಲ್ಲಿಯಲ್ಲಿ ಭೇಟಿ ಮಾಡಿದ ಬಳಿಕ ಸೋಮವಾರ ಹೇಳಿಕೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜ್ಯದಲ್ಲಿ ಶೀಘ್ರ ಹೊಸ ಸರಕಾರ ರಚಿಸಲಾಗುವುದು. ಈ ಬಗ್ಗೆ ತನಗೆ ವಿಶ್ವಾಸವಿದೆ ಎಂದಿದ್ದಾರೆ.
ಆದರೆ ಹೊಸ ಸರಕಾರ ರಚನೆಯ ಕುರಿತು ಯಾರಾದರೂ ಏನನನ್ನಾದರೂ ಹೇಳಿದ್ದರೆ ಆ ಬಗ್ಗೆ ತಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ರಾಜ್ಯದಲ್ಲಿ ನೂತನ ಸರಕಾರ ಶೀಘ್ರ ರಚನೆಯಾಗಬೇಕಿದೆ ಮತ್ತು ರಚನೆಯಾಗಲಿದೆ ಎಂಬ ವಿಶ್ವಾಸ ತನಗಿದೆ ಎಂದು ಫಡ್ನವೀಸ್ ಹೇಳಿದ್ದಾರೆ. ಈ ಮಧ್ಯೆ, ಸರಕಾರ ರಚನೆಗೆ ಮೊದಲು ಅತೀ ದೊಡ್ಡ ಪಕ್ಷವಾದ ಬಿಜೆಪಿಯನ್ನು ಆಹ್ವಾನಿಸಬೇಕು ಎಂಬ ನಿಲುವನ್ನು ಶಿವಸೇನೆ ತಳೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಜೆಪಿ ಬಹುಮತ ಸಾಬೀತುಪಡಿಸಲು ವಿಫಲವಾದರೆ , ನಿಯಮದಂತೆ ಬಳಿಕ ಎರಡನೇ ಅತೀ ದೊಡ್ಡ ಪಕ್ಷವಾದ ತನಗೆ ರಾಜ್ಯಪಾಲರು ಆಹ್ವಾನ ನೀಡುತ್ತಾರೆ.
ಆಗ ಎನ್‌ಸಿಪಿ ಮತ್ತು ಕಾಂಗ್ರೆಸ್ ಬೆಂಬಲ ಪಡೆದು ಬಹುಮತ ಸಾಬೀತುಪಡಿಸಿ ಸರಕಾರ ರಚಿಸುವ ಇರಾದೆಯನ್ನು ಶಿವಸೇನೆ ಹೊಂದಿದೆ ಎಂದು ವರದಿಐಆಗಿದೆ. ಶಿವಸೇನೆ ಮುಖಂಡ ಸಂಜಯ್ ರಾವತ್ ಕೂಡಾ ಈ ಬಗ್ಗೆ ರವಿವಾರ ಸುಳಿವು ನೀಡಿದ್ದಾರೆ.







