ಅನ್ವರ್ ಮಾಣಿಪ್ಪಾಡಿ ವರದಿ ಜಾರಿಗೆ ಸರಕಾರ ಪ್ರಯತ್ನಿಸುತ್ತಿರುವುದು ಶ್ಲಾಘನೀಯ : ಮುತ್ತಲಿಬ್ ಬೆಳ್ಮ

ಮುತ್ತಲಿಬ್ ಬೆಳ್ಮ
ಮಂಗಳೂರು: ವಕ್ಫ್ ಆಸ್ತಿಯ ವಂಚನೆ ಪ್ರಕರಣ ಸಂಬಂಧಿಸಿ ಅನ್ವರ್ ಮಾಣಿಪ್ಪಾಡಿ ಅವರ ವರದಿ ಜಾರಿಗೆ ಸರಕಾರ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದು ದ.ಕ. ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಉಪಾಧ್ಯಕ್ಷ ಮುತ್ತಲಿಬ್ ಬೆಳ್ಮ ತಿಳಿಸಿದ್ದಾರೆ.
ಸುಮಾರು ಎರಡು ಲಕ್ಷದ ಮೂವತ್ತು ಸಾವಿರ ಕೋಟಿ ರೂ. ಮೌಲ್ಯ ವಕ್ಫ್ ಆಸ್ತಿ ಭ್ರಷ್ಟ ರಾಜಕಾರಣಿಗಳ ಪಾಲಾಗಿದೆ. ನಿಯಮದ ಪ್ರಕಾರ ವಕ್ಫ್ ಆಸ್ತಿ ಪರಭಾರೆ ಮಾಡುವ ಹಾಗಿಲ್ಲ ಆದರೂ ಇತರರ ಹೆಸರಿಗೆ ವರ್ಗಾಯಿಸಲಾಗಿದೆ ಮತ್ತು ಕೆಲವು ಕಡೆ ಅತೀ ಕಡಿಮೆ ಬಾಡಿಗೆಗೆ ವಕ್ಫ್ ಆಸ್ತಿಯನ್ನು ನೀಡಿ ಮುಸ್ಲಿಂ ಸಮುದಾಯವನ್ನು ಮತ್ತು ಸರಕಾರವನ್ನು ವಂಚಿಸಲಾಗಿದೆ. ಇದಕ್ಕೆಲ್ಲಾ ಪರಿಹಾರವಾಗಿ ಅನ್ವರ್ ಮಾಣಿಪ್ಪಾಡಿ ಅವರ ವರದಿ ಜಾರಿಗೆ ಸರಕಾರ ಪ್ರಯತ್ನಿಸುತ್ತಿರುವುದು ಶ್ಲಾಘನೀಯ, ಇಡೀ ಮುಸ್ಲಿಂ ಸಮುದಾಯದ ಒಕ್ಕೊರಳಿನ ಆಗ್ರಹವೂ ಇದೇ ಆಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರದ ಈ ಕ್ರಮವನ್ನು ಮುಸಲ್ಮಾನರು ಸ್ವಾಗತಿಸುತ್ತಾರೆ ಎಂದು ಮುತ್ತಲಿಬ್ ಬೆಳ್ಮ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





