ಹಿಂದುಳಿದ ವರ್ಗದ ಬಾಲಕರ ಹಾಸ್ಟೆಲ್‌ಗೆ ಶಿಲಾನ್ಯಾಸ

ಉಡುಪಿ, ನ.4: ನಿಟ್ಟೂರು ಎಜುಕೇಶನಲ್ ಸೊಸೈಟಿಯು ಸರಕಾರಕ್ಕೆ ದಾನ ವಾಗಿ ನೀಡಿರುವ 30 ಸೆಂಟ್ಸ್ ಜಾಗದಲ್ಲಿ 100 ವಿದ್ಯಾರ್ಥಿಗಳಿಗೆ ಅವಕಾಶ ಇರುವ ಹಿಂದುಳಿದ ವರ್ಗಗಳ ಬಾಲಕರ ಹಾಸ್ಟೆಲ್‌ಗೆ ಉಡುಪಿ ಶಾಸಕ ಹಾಗೂ ನಿಟ್ಟೂರು ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಕೆ.ರಘುಪತಿ ಭಟ್ ರವಿವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ರಘುಪತಿ ಭಟ್, ಈ ವಸತಿ ನಿಲಯಕ್ಕೆ 2 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, 2020 ಮೇ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ನಿಟ್ಟೂರು ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ವಿದ್ಯಾರ್ಥಿಗಳ ದಾಖಲಾತಿ ಅಧಿಕಗೊಳ್ಳುವಲ್ಲಿ ಅನುಕೂಲ ವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಜಿಲ್ಲಾ ಸಹಾಯಕ ನಿರ್ದೇಶಕ ಹಾಕಪ್ಪ ಲಮಾಣಿ, ತಾಲೂಕು ವಿಸ್ತರಣಾಧಿಕಾರಿ ಗಿರಿಧರ್ ಗಾಣಿಗ, ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್ ಕುಮಾರ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ ಚಂದ್ರಾಧರ್, ಕಾರ್ಯದರ್ಶಿ ಪ್ರದೀಪ್ ಜೋಗಿ, ಉಪಾಧ್ಯಕ್ಷ ದಿನೇಶ ಪಿ. ಪೂಜಾರಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ನಾಗಾನಂದ ವಾಸುದೇವ ಆಚಾರ್ಯ, ನರಗಸಭಾ ಸದಸ್ಯ ಪ್ರಭಾಕರ ಪೂಜಾರಿ, ಗಿರಿಧರ್ ಆಚಾರ್ಯ, ನಿವೃತ್ತ ಮುಖ್ಯೋಪಾಧ್ಯಾಯರಾದ ಎಸ್.ವಿ.ಭಟ್, ವೇಣುಗೋಪಾಲ ಆಚಾರ್ಯ, ಕೆ.ಸುಬ್ರಹ್ಮಣ್ಯ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋ ಪಾಧ್ಯಾಯ ಮುರಲಿ ಕಡೆಕಾರ್ ವಂದಿಸಿದರು.







