ಆಡಿಯೋ ಪ್ರಕರಣ: ಬಿಎಸ್‌ವೈ ವಿರುದ್ಧ ರಾಜ್ಯಪಾಲ, ಎಸಿಬಿಗೆ ಆರೆಸ್ಸೆಸ್ ಮಾಜಿ ಪ್ರಚಾರಕ ದೂರು

ಬೆಂಗಳೂರು, ನ. 5: ಶಾಸಕರ ಖರೀದಿಗೆ ಆಮಿಷವೊಡ್ಡಿದ ಆಡಿಯೋ ಪ್ರಕರಣ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ರಾಜ್ಯಪಾಲ ಮತ್ತು ಎಸಿಬಿಗೆ ಆರೆಸ್ಸೆಸ್ ಮಾಜಿ ಪ್ರಚಾರಕ ಎನ್.ಹನುಮೇಗೌಡ ದೂರು ನೀಡಿದ್ದಾರೆ.
ಶಾಸಕರ ಖರೀದಿಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಚಾರ, ಕಪ್ಪುಚುಕ್ಕೆ. ಇದು ಅಕ್ರಮವಾಗಿದ್ದು ಭ್ರಷ್ಟಾಚಾರಕ್ಕೆ ಸಮ. ಹೀಗಾಗಿ ಬಿಎಸ್‌ವೈ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಾಸಕರಿಗೆ ಆಮಿಷವೊಡ್ಡಿ, ಮುಂಬೈನಲ್ಲಿ ಕೂಡಿಟ್ಟು ರಾಜೀನಾಮೆ ಕೊಡಿಸಿದ್ದು ಪ್ರಜಾತಂತ್ರಕ್ಕೆ ಮಾಡಿದ ಅಪಚಾರ ಎಂದು ಅವರು ದೂರಿನಲ್ಲಿ ಟೀಕಿಸಿದ್ದಾರೆ.
Next Story





