ಹಿರಿಯ ನಾಗರಿಕರ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಕ್ರಮ
ಉಡುಪಿ, ನ.5: ಜಿಲ್ಲೆಯ ಶಿರ್ವ ಗ್ರಾಪಂನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಇಲಾಖಾ ಸೌಲಭ್ಯ ಅರಿವಿನ ಮಾಹಿತಿ ಶಿಬಿರ ನಡೆಯಿತು.
ಹಿರಿಯ ನಾಗರಿಕರ ಸರಕಾರಿ ಸೌಲ್ಯಗಳ ಕುರಿತು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಂಯೋಜಕ ಗಣೇಶ್ ಕೊಕ್ಕರ್ಣೆ ಮಾಹಿತಿ ನೀಡಿದರು.
ಮುಕ್ತ ವಿಶ್ವವಿದ್ಯಾಲಯ ಪ್ರವೇಶ ಅವಧಿ ವಿಸ್ತರಣೆ ಮುಕ್ತ ವಿಶ್ವವಿದ್ಯಾಲಯ ಪ್ರವೇಶ ಅವಧಿ ವಿಸ್ತರಣೆ ಉಡುಪಿ, ನ.5: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉಡುಪಿ ಪ್ರಾದೇಶಿಕ ಕೇಂದ್ರದಲ್ಲಿ 2019-20ನೇ ಶ್ಯೆಕ್ಷಣಿಕ ಸಾಲಿಗೆ ದ್ವಿತೀಯ ಮತ್ತು ಅಂತಿಮ ಬಿ.ಎ/ಬಿ.ಕಾಂ ಹಾಗೂ ಅಂತಿಮ ಎಂ.ಎ/ಎಂ.ಕಾಂ. ಪದವಿಗಳಿಗೆ ಪ್ರವೇಶವನ್ನು ನವೀಕರಣ ಮಾಡಿಕೊಳ್ಳುವ ಅವಧಿಯನ್ನು ನ.15ರವರೆಗೆ ವಿಸ್ತರಿಸಲಾಗಿದೆ.
2018-19ನೇ ಸಾಲಿನಲ್ಲಿ ಪ್ರಥಮ ಬಿ.ಎ/ಬಿ.ಕಾಂ ಮತ್ತು ಅಂತಿಮ ಎಂ.ಎ/ಎಂ.ಕಾಂ ಪದವಿಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು 2019-20ನೇ ಸಾಲಿನ ಶ್ಯೆಕ್ಷಣಿಕ ಸಾಲಿನಲ್ಲಿ ದ್ವಿತೀಯ ವರ್ಷಕ್ಕೆ ನವೀಕರಣ ಮಾಡಿಕೊಳ್ಳಲು 400 ರೂ. ದಂಡ ಶುಲ್ಕದೊಂದಿಗೆ ಪ್ರವೇಶ ಪಡೆಯಲು ಹಾಗೂ 2014-15ಕ್ಕೆ ಹಿಂದಿನ ವರ್ಷಗಳಲ್ಲಿ ಪ್ರಥಮ ಬಿ.ಎ/ಬಿ.ಕಾಂ ಹಾಗೂ ಎಂ.ಎ/ಎಂ.ಕಾಂ ಪದವಿಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು 2019-20ನೇ ಶ್ಯೆಕ್ಷಣಿಕ ಸಾಲಿನಲ್ಲಿ ದ್ವಿತೀಯ ಹಾಗೂ ಅಂತಿಮ ವರ್ಷಕ್ಕೆ ನವೀಕರಣ ಮಾಡಿಕೊಳ್ಳಲು ಯಾವುದೇ ದಂಡ ಶುಲ್ಕವಿಲ್ಲದೇ ಪ್ರವೇಶ ಪಡೆಯಲು ನ.15ರವರೆಗೆ ಪ್ರವೇಶದ ಅಂತಿಮ ದಿನವನ್ನು ವಿಸ್ತರಿಸಲಾಗಿದೆ ಎಂದು ಉಡುಪಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಕೆ.ಪಿ.ಮಹಾಲಿಂಗಯ್ಯ ಕಲ್ಕುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







