ಬಾಬರಿ ಮಸೀದಿ ತೀರ್ಪು: ಶಾಂತಿ ಕಾಪಾಡಲು ಪಿಎಫ್ಐ ಮನವಿ

ಬೆಂಗಳೂರು, ನ.5: ಕೆಲವೇ ದಿನಗಳಲ್ಲಿ ಅಯೋಧ್ಯ ತೀರ್ಪು ಹೊರಬೀಳಲಿದ್ದು, ತೀರ್ಪು ಏನೇ ಬಂದರೂ ಸಹ ಎಲ್ಲರೂ ಶಾಂತಿ ಮತ್ತು ಸಾಮರಸ್ಯ ಕಾಪಾಡಿಕೊಳ್ಳುವಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮನವಿ ಮಾಡಿದೆ.
ನ್ಯಾಯಾಂಗ ಬದ್ಧತೆಯನ್ನು ತೋರುವಾಗ ಕಾನೂನಿನ ನಿಯಮ ಮತ್ತು ನ್ಯಾಯಾಂಗದ ಪಾವಿತ್ರತೆಯನ್ನು ಎತ್ತಿ ಹಿಡಿಯುವುದು ಎಲ್ಲ ವರ್ಗದ ಹೊಣೆಯಾಗಿರುತ್ತದೆ. ಪ್ರಕರಣದ ತೀರ್ಪು ಪರವಾಗಿರಲಿ ವಿರುದ್ಧವಾಗಿರಲಿ ಶಾಂತಿಯಿಂದ ವರ್ತಿಸಬೇಕು ಎಂದು ಪ್ರಕಟನೆ ಮೂಲಕ ಸಂಘಟನೆ ಕೋರಿದೆ.
Next Story





