ಸುರತ್ಕಲ್ ಬ್ಲಾಕ್ ಕಾಂಗ್ರೆಸ್ : ಮುಂದುವರಿದ ರಾಜೀನಾಮೆ ಪರ್ವ
ಸುರತ್ಕಲ್, ನ. 6: ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಮಂಗಳೂರು ಬಾವಾ ಹಾಗೂ ಇಪ್ಪತ್ತೊಂದು ಮಂದಿ ಪದಾಧಿಕಾರಿಗಳ ಸಹಿತ ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ.
ಕಳೆದ 35 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರನಾಗಿ, ಕಾಟಿಪಳ್ಳ ಮಂಡಲ ಪಂಚಾಯತ್ ಉಪಪ್ರಧಾನನಾಗಿ ಕಾರ್ಯ ನಿರ್ವಹಿಸಿದ್ದೆ. ಪಕ್ಷದ ಅಧ್ಯಕ್ಷ ಸ್ಥಾನದಿಂದ ಹೇಳದೆ ಬದಲಿಸಲಾಯಿತು. ಇದೀಗ ಅಲ್ಪಸಂಖ್ಯಾತ ಘಟಕದ ಜತೆ ಸಮಾಲೋಚಿಸದೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಘಟಕವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಮನನೊಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ, ಬ್ಲಾಕ್ ಅಧ್ಯಕ್ಷರಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದೇವೆ ಎಂದು ಮಂಗಳೂರು ಬಾವಾ ತಿಳಿಸಿದ್ದಾರೆ.
Next Story





