Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಚರ್ಮದ ಕ್ಯಾನ್ಸರ್‌ನ ಕಾರಣಗಳು ಮತ್ತು...

ಚರ್ಮದ ಕ್ಯಾನ್ಸರ್‌ನ ಕಾರಣಗಳು ಮತ್ತು ಲಕ್ಷಣಗಳು

ವಾರ್ತಾಭಾರತಿವಾರ್ತಾಭಾರತಿ6 Nov 2019 9:25 PM IST
share
ಚರ್ಮದ ಕ್ಯಾನ್ಸರ್‌ನ ಕಾರಣಗಳು ಮತ್ತು ಲಕ್ಷಣಗಳು

ಸೂರ್ಯನ ಬೆಳಕಿನಲ್ಲಿಯ ಹಾನಿಕಾರಕ ಅಲ್ಟ್ರಾವಯೊಲೆಟ್ ಅಥವಾ ನೇರಳಾತೀತ ಕಿರಣಗಳಿಗೆ ಅತಿಯಾಗಿ ಒಡ್ಡಿಕೊಳ್ಳುವುದು ಚರ್ಮದ ಕ್ಯಾನ್ಸರ್ ಉಂಟಾಗಲು ಮುಖ್ಯ ಕಾರಣವಾಗಿದೆ. ಈ ಕಿರಣಗಳು ಜೀವಕೋಶಗಳ ಸ್ವರೂಪದಲ್ಲಿ ಬದಲಾವಣೆಗಳಿಗೆ ಕಾರಣವಾಗಿ ಅವು ಅಸಹಜ ಸಂಖ್ಯೆಯಲ್ಲಿ ವೃದ್ಧಿಗೊಳ್ಳುವಂತೆ ಮಾಡುತ್ತವೆ. ಆದರೆ ಚರ್ಮದ ಕ್ಯಾನ್ಸರ್‌ನ ಲಕ್ಷಣಗಳು ತಕ್ಷಣಕ್ಕೆ ಗೋಚರಿಸುವುದಿಲ್ಲ. ವ್ಯಕ್ತಿಯೋರ್ವ ಸುದೀರ್ಘಾವಧಿಗೆ ನೇರಳಾತೀತ ಕಿರಣಗಳಿಗೆ ಒಡ್ಡಿಕೊಂಡಾಗ ಆತನ 40 ವರ್ಷ ಪ್ರಾಯದ ಬಳಿಕ ಚರ್ಮದ ಕ್ಯಾನ್ಸರ್‌ನ ಲಕ್ಷಣಗಳು ಪ್ರಕಟಗೊಳ್ಳುತ್ತವೆ.

►ಚರ್ಮದ ಕ್ಯಾನ್ಸರ್‌ಗೆ ಕಾರಣಗಳು

ಸೂರ್ಯನ ಬಿಸಿಲಿಗೆ ಅತಿಯಾಗಿ ಒಡ್ಡಿಕೊಂಡ ಚರ್ಮದ ಜೀವಕೋಶಗಳು ತಮಗುಂಟಾದ ಹಾನಿಯನ್ನು ಸ್ವಯಂ ಸರಿಪಡಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುವುದರಿಂದ ಅಂತಹ ವ್ಯಕ್ತಿಯು ಚರ್ಮದ ಕ್ಯಾನ್ಸರ್‌ಗೆ ಗುರಿಯಾಗುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ಇದಲ್ಲದೆ ವಂಶವಾಹಿ ಕಾರಣದಿಂದಾಗಿಯೂ ಚರ್ಮದ ಕ್ಯಾನ್ಸರ್ ಉಂಟಾಗಬಹುದು. ಬಿಳಿಯ ಬಣ್ಣದ ಚರ್ಮವನ್ನು ಹೊಂದಿರುವವರಲ್ಲಿ ಮತ್ತು ನಸುಕಂದು ಮಚ್ಚೆಗಳು (ಪಾಶ್ಚಾತ್ಯರ ಚರ್ಮದಂತೆ) ಸುಲಭವಾಗಿ ಉಂಟಾಗುವವರಲ್ಲಿ ಈ ಕ್ಯಾನ್ಸರ್ ಸಾಮಾನ್ಯವಾಗಿದೆ. ಆರ್ಸೆನಿಕ್‌ನಂತಹ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದೂ ಚರ್ಮದ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ.

►ಲಕ್ಷಣಗಳು

 ಶರೀರದ ನಿರ್ದಿಷ್ಟವಾದ,ಸಾಮಾನ್ಯವಾಗಿ ಸೂರ್ಯನ ಬಿಸಿಲಿಗೆ ಅತಿಯಾಗಿ ಒಡ್ಡಿಕೊಂಡಿರುವ ಭಾಗದ ಚರ್ಮದ ಬಣ್ಣದಲ್ಲಿ ಬದಲಾವಣೆಯು ಚರ್ಮದ ಕ್ಯಾನ್ಸರ್‌ನ ಮೊದಲ ಮತ್ತು ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ. ಈ ಬಣ್ಣಗೆಡುವಿಕೆ ಪ್ರಕ್ರಿಯೆಯು ಶೀಘ್ರವೇ ಚರ್ಮದ ಇತರ ಕಡೆಗಳಲ್ಲಿ ಹರಡಿಕೊಳ್ಳುತ್ತದೆ. ಶರೀರದಲ್ಲಿ ಈಗಾಗಲೇ ಇರುವ ಮಚ್ಚೆಗಳ ಆಕಾರದಲ್ಲಿಯೂ ಬದಲಾವಣೆ ಕಂಡುಬರಬಹುದು. ಕೆಲವು ಪ್ರಕರಣಗಳಲ್ಲಿ ಮಚ್ಚೆಯಂತೆ ಕಾಣುವ ಹೊಸ ಬೆಳವಣಿಗೆಯಾಗಬಹುದು. ಕೆಲವು ಪ್ರಕರಣಗಳಲ್ಲಿ ಪೀಡಿತ ಜಾಗದ ಚರ್ಮದಲ್ಲಿ ತುರಿಕೆಯುಂಟಾಗಬಹುದು,ತರಚಿದಂತೆ ಗಾಯಗಳು ಮತ್ತು ರಕ್ತಸ್ರಾವ ಉಂಟಾಗಬಹುದು. ಚರ್ಮವು ಮೇಣದಂತೆ ಕಂಡುಬರುವುದನ್ನು ರೋಗಿಗಳು ಗಮನಿಸಬಹುದು. ಚರ್ಮವನ್ನು ಸ್ಪರ್ಶಿಸಿದಾಗ ಕೆಲವು ಪುಟ್ಟಗಂಟುಗಳು ಪತ್ತೆಯಾಗಬಹುದು ಮತ್ತು ಈ ಗಂಟುಗಳ ಸುತ್ತಲಿನ ಜಾಗವು ಬಣ್ಣವನ್ನು ಕಳೆದುಕೊಂಡಿರಬಹುದು.

►ರೋಗನಿರ್ಧಾರ ಹೇಗೆ?

ಚರ್ಮದ ಕ್ಯಾನ್ಸರ್ ಉಂಟಾಗಿದೆಯೇ ಎನ್ನುವುದನ್ನು ಪತ್ತೆ ಹಚ್ಚಲು ಪೀಡಿತ ಭಾಗದ ಚರ್ಮದ ತುಣುಕಿನ ಬಯಾಪ್ಸಿ (ಪ್ರಯೋಗಾಲಯ ಪರೀಕ್ಷೆ) ಏಕಮೇವ ಮಾರ್ಗವಾಗಿದೆ. ಕ್ಯಾನ್ಸರ್ ಇದೆ ಎಂದಾದರೆ ಅದು ಎಷ್ಟರ ಮಟ್ಟಿಗೆ ಹರಡಿದೆ ಎನ್ನುವುದನ್ನು ತಿಳಿದುಕೊಳ್ಳಲು ವೈದ್ಯರು ವಿವಿಧ ತಪಾಸಣೆಗಳನ್ನು ನಡೆಸುತ್ತಾರೆ.

►ಚರ್ಮದ ಕ್ಯಾನ್ಸರ್‌ಗೆ ಚಿಕಿತ್ಸೆ

 ಚರ್ಮದ ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆಯು ಅತ್ಯಂತ ಸಾಮಾನ್ಯ ಮತ್ತು ಸರಳವಾದ ಪರಿಹಾರವಾಗಿದೆ. ಈ ಪ್ರಕ್ರಿಯೆಯಲ್ಲಿ ಪೀಡಿತ ಭಾಗದಲ್ಲಿಯ ಚರ್ಮ ಮತ್ತು ಸುತ್ತಲಿನ ಕೆಲವು ಆರೋಗ್ಯವಂತ ಅಂಗಾಂಶಗಳನ್ನು ತೆಗೆಯಲಾಗುತ್ತದೆ. ಕ್ಯಾನ್ಸರ್ ಇತರ ಜಾಗಗಳಿಗೆ ಹರಡಿಕೊಂಡಿದ್ದರೆ ಕಿಮೊಥೆರಪಿ ಅಗತ್ಯವಾಗಬಹುದು. ಈ ವಿಧಾನದಲ್ಲಿ ಕ್ಯಾನ್ಸರ್ ನಿಗ್ರಹ ಔಷಧಿಗಳ ನೆರವಿನಿಂದ ರೋಗಪೀಡಿತ ಜೀವಕೋಶಗಳನ್ನು ನಾಶಗೊಳಿಸಲಾಗುತ್ತದೆ.

ಚರ್ಮದ ಕ್ಯಾನ್ಸರ್‌ನ್ನು ಗುಣಪಡಿಸಲು ಕೃಯೊಸರ್ಜರಿಯಂತಹ ಇತರ ವಿಧಾನಗಳನ್ನೂ ಬಳಸಲಾಗುತ್ತದೆ. ಅತೀವ ಉಷ್ಣತೆಯ ಮೂಲಕ ಪೀಡಿತ ಜೀವಕೋಶಗಳನ್ನು ಕೊಲ್ಲಲಾಗುತ್ತದೆ. ಚಿಕಿತ್ಸೆಯ ಬಳಿಕ ಬಾಧಿತ ಅಂಗಾಂಶವು ತನ್ನಷ್ಟಕ್ಕೆ ಉದುರುತ್ತದೆ. ಲೇಸರ್ ಥೆರಪಿ ಮತ್ತು ವಿಕಿರಣ ಚಿಕಿತ್ಸೆಯನ್ನೂ ನಡೆಸಲಾಗುತ್ತದೆ.

 ಚರ್ಮದ ಕ್ಯಾನ್ಸರ್‌ಗೆ ಚಿಕಿತ್ಸೆಯ ಬಳಿಕ ಸಾಮಾನ್ಯವಾಗಿ ಹೆಚ್ಚಿನ ಅಡ್ಡ ಪರಿಣಾಮಗಳಿರುವುದಿಲ್ಲ. ಚರ್ಮದ ಕ್ಯಾನ್ಸರ್‌ನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿದರೆ ಅದು ಎಲ್ಲ ಕ್ಯಾನ್ಸರ್‌ಗಳ ಪೈಕಿ ಸೂಕ್ತ ಚಿಕಿತ್ಸೆಯಿಂದ ಅತ್ಯಂತ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದಾದ ರೋಗವಾಗಿದೆ.. ಸಾಮಾನ್ಯವಾಗಿ ಚರ್ಮದ ಕ್ಯಾನ್ಸರ್ ಇತರ ಜಾಗಗಳಿಗೆ ಹರಡುವುದಿಲ್ಲ,ಒಂದು ವೇಳೆ ಹರಡಿದರೂ ಶಸ್ತ್ರಚಿಕಿತ್ಸೆಯು ಅದು ಮರುಕಳಿಸುವುದರ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X