ಮನೆಗೆ ನುಗ್ಗಿ ನಗ ನಗದು ಕಳವು
ಶಿರ್ವ, ನ.6: ಬೆಳಪು ಮಡ್ಲೆ ಬೆನ್ನಿ ಎಂಬಲ್ಲಿ ನ.5ರಂದು ರಾತ್ರಿ ವೇಳೆ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ನಗ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಬೇಬಿ ಶೆಟ್ಟಿ ಎಂಬವರ ಮನೆಯ ಅಡುಗೆಕೋಣೆಯ ಬಾಗಿಲಿನ ಚಿಲಕವನ್ನು ಮುರಿದು ಒಳನುಗ್ಗಿದ ಕಳ್ಳರು, ಮನೆಯ ಬೆಡ್ರೂಮ್ನ ಕಪಾಟಿನ ಲಾಕರ್ ನಲ್ಲಿದ್ದ ಒಟ್ಟು 80 ಗ್ರಾಂ ತೂಕದ ಸೊಂಟದ ಚೈನ್, ಚಿನ್ನದ ಮುತ್ತಿನ ಸರ, 2 ಚೈನ್, 2 ಚಿನ್ನದ ಬಳೆ, ಎರಡು ಚಿನ್ನದ ಕಿವಿಯ ಚಿನ್ನಾಭರಣಗಳು ಹಾಗೂ 13,000ರೂ. ನಗದು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 1,60,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story