ಬೈಕ್ ಢಿಕ್ಕಿ: ವಿದ್ಯಾರ್ಥಿಗೆ ಗಾಯ
ಮಂಗಳೂರು, ನ. 6: ನಗರದ ಡೊಂಗರಕೇರಿ ಕೆನರಾ ಶಾಲೆಯ ಎದುರು ಬುಧವಾರ ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ಶಾಲಾ ವಿದ್ಯಾರ್ಥಿ 7 ನೇ ತರಗತಿಯ ಪ್ರಜ್ವಲ್ (12) ಗಾಯಗೊಂಡಿದ್ದಾನೆ.
ಆತನ ತಲೆ ಮತ್ತು ಪಾದಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಮಂಗಳೂರು ನಗರ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
Next Story





