ಮಂಗಳೂರು: ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಜೈ ಹಿಂದ್ ಈಜು ಕ್ಲಬ್ ಗೆ ಹಲವು ಪದಕ

ಬೆಂಗಳೂರು: ಅಖಿಲ ಭಾರತ ವಿಶ್ವ ವಿದ್ಯಾಲಯ ವತಿಯಿಂದ 14 ರಿಂದ 19ನೇ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಂಗಳೂರಿನ ಜೈ ಹಿಂದ್ ಈಜು ಕ್ಲಬ್‌ನ ಈಜು ಪಟುಗಳು ಒಟ್ಟು 33 ಪದಕಗಳನ್ನು ಪಡೆದುಕೊಂಡಿದ್ದಾರೆ.
ಜನನಿ ಕಣ್ಣನ್ – 1 ಬೆಳ್ಳಿ, 1 ಕಂಚು, ವಫಿ ಅಬ್ದುಲ್ ಹಾಕೀಮ್ 1 ಚಿನ್ನ, 1 ಕಂಚು, ವಿದ್ಯಾ ಭಂಡಾರಿ 2 ಬೆಳ್ಳಿ, ಶ್ರೀಣನ್ ಬಂಗೇರ 4 ಚಿನ್ನ, ನೌನಿಯ ಜೆನ್ಲಿನ್ ಡಿ’ಸೋಜ - 3 ಚಿನ್ನ, 2 ಬೆಳ್ಳಿ, ಅಲೈಸ್ಟರ್ ಸೌಮ್ಯುಲ್ ರೆಗೋ - 1 ಚಿನ್ನ, 1 ಬೆಳ್ಳಿ ಹಾಗೂ 1 ಕಂಚು, ಅಭಿಷ್ ಆರ್ ರಾವ್ - 1 ಚಿನ್ನ, 1 ಬೆಳ್ಳಿ, 1 ಕಂಚು ದಿಯಾ ಶೆಟ್ಟಿ – 2 ಕಂಚು, ಸ್ಪೂರ್ತಿ ಆರ್ ರಾವ್ - 2 ಬೆಳ್ಳಿ, 1 ಕಂಚು ಸಮರ್ಥ್ ಎಸ್. ಕುಮಾರ್ - 1 ಬೆಳ್ಳಿ, 2 ಕಂಚು, ಆದಿತ್ಯ ಭಂಡಾರಿ 1ಬೆಳ್ಳಿ, 2 ಕಂಚು ಇಶಿತ - 1 ಚಿನ್ನದ ಪದಕ ಪಡೆದಿದ್ದಾರೆ.
ಇವರಲ್ಲಿ ವಫಿ ಹಕೀವ್, ಜನನಿ ಕಣ್ಣನ್, ವಿದ್ಯಾ ಭಂಡಾರಿ ಇವರು ಬೋಪಾಲ್‌ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಲಿರುವರು. ಶ್ರೀಶಾನ್ ಬಂಗೇರ, ಸಾನಿಯ ಡಿ’ಸೋಜ, ಅಲೈಸ್ಟರ್ ಸೌಮ್ಯುಲ್ ರೆಗೋ, ಸ್ಪೂರ್ತಿ ಆರ್ ರಾವ್ ಇವರು ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಲಿರುವರು ಹಾಗೂ ಇಶೀತ ಸುಜಾನ್‌ನಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವ ವಿದ್ಯಾಲಯ ಈಜು ಸ್ಪರ್ಧೆಯಲ್ಲಿ ನಮ್ಮ ರಾಜ್ಯದಿಂದ ಪ್ರತಿನಿಧಿಸಲಿರುವರು.
ಇವರು ಜೈ ಹಿಂದ್ ಈಜು ಕ್ಲಬ್‌ನ ಸದಸ್ಯರಾಗಿದ್ದು, ಮುಖ್ಯ ಈಜು ತರಬೇತುದಾರರಾದ ವಿ. ರಾಮಕೃಷ್ಣ ರಾವ್, ಸಹಾಯಕ ಈಜು ತರಬೇತುದಾರ ರಾಜೇಶ್ ಬೆಂಗ್ರೆ ಅಂತೋನಿ ಹಾಗೂ ನಾಗರಾಜ ಕಾರ್ವಿ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.







