ಆನಂದ ಅಮೀನ್ ಬೆಂಗ್ರೆ ಮಾಸ್ಟರ್ಸ್ ಗೇಮ್ಸ್ ನಲ್ಲಿ ಚಿನ್ನ
ಮಂಗಳೂರು, ನ.7: ಮಾಸ್ಟರ್ಸ್ ಗೇಮ್ಸ್ ಸಂಘದ ಆಶ್ರಯದಲ್ಲಿ ನಗರದಲ್ಲಿ ಮೊದಲ ಬಾರಿಗೆ ಇತ್ತೀಚೆಗೆ ನಡೆದ ಒಂದನೇ ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್ ಕ್ರೀಡಾಕೂಟದಲ್ಲಿ ಮಂಗಳೂರು ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಆನಂದ ಅಮೀನ್ ಬೆಂಗ್ರೆ ಈಜು ವಿಭಾಗದಲ್ಲಿ ಎರಡು ಚಿನ್ನ ಪದಕ ಪಡೆದಿದ್ದಾರೆ.
ಆನಂದ್ ಅಮೀನ್ 50 ಮೀಟರ್ ಮತ್ತು 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡು 2020ರ ಫೆಬ್ರವರಿಯಲ್ಲಿ ಗುಜರಾತಿನ ಒಡೋದರದಲ್ಲಿ ನಡೆಯಲಿರುವ ಮೂರನೇ ರಾಷ್ಟ್ರೀಯ ಮಾಸ್ಟರ್ಸ್ ಗೇಮ್ಸ್ನಲ್ಲಿ ಭಾಗವಹಿಸಲಿದ್ದಾರೆ.
Next Story