ವಾಯುವ್ಯ ಇರಾನ್ನಲ್ಲಿ ಭೂಕಂಪನ: ಕನಿಷ್ಠ ಐವರು ಬಲಿ, 20 ಜನರಿಗೆ ಗಾಯ
ಟೆಹರಾನ್, ನ.8: ವಾಯುವ್ಯ ಇರಾನ್ನಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ 5.9ರಷ್ಟು ತೀವ್ರತೆಯ ಭೂಕಂಪನದಲ್ಲಿ ಕನಿಷ್ಠ ಐವರು ಬಲಿಯಾಗಿದ್ದು, 20ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ದೃಶ್ಯ ಮಾಧ್ಯಮಗಳು ವರದಿ ಮಾಡಿವೆ.
ಸ್ಥಳೀಯ ಕಾಲಮಾನ ಶುಕ್ರವಾರ ಬೆಳಗ್ಗೆ 2:30ರ ಸುಮಾರಿಗೆ ಹಸ್ಟ್ರಡ್ ನಗರದಿಂದ 60 ಕಿ.ಮೀ.ದೂರದಲ್ಲಿ ಭೂಕಂಪನ ಸಂಭವಿಸಿದೆ. ಭೂಕಂಪನದಿಂದ ಸಾಕಷ್ಟು ಸಾವು-ನೋವಾಗಿರುವ ಸಾಧ್ಯತೆಯಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.
ಕಟ್ಟಡಗಳು ಕುಸಿದುಬಿದ್ದಿರುವ ದೃಶ್ಯಗಳು ಅಂತರ್ಜಾಲದ ವಿಡಿಯೋದಲ್ಲಿ ಕಂಡುಬಂದಿದೆ. ನಿವಾಸಿಗಳು ತಮ್ಮ ಮನೆಯಿಂದ ಹೊರಗೆ ಅಥವಾ ಕಾರಿನೊಳಗೆ ಕುಳಿತುಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Next Story