ತೀರ್ಪು ಯಾರ ಪರವೇ ಬರಲಿ ಯಾರೂ ಭಾವೋದ್ವೇಗಕ್ಕೆ ಒಳಗಾಗಬಾರದು: ಮುಖ್ಯಮಂತ್ರಿ ಮನವಿ
ಬೆಂಗಳೂರು, ನ.9: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪು ಯಾರ ಪರವೇ ಬರಲಿ ಜನತೆ ಭಾವೋದ್ವೇಗಕ್ಕೆ ಒಳಗಾಗದೆ ಶಾಂಕಿ ಕಾಪಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
‘‘ಶತಮಾನದಷ್ಟು ಹಳೆಯದಾದ ಅಯೋಧ್ಯೆ ವಿವಾದ ಕುರಿತು, ಸುಪ್ರೀಂ ಕೋರ್ಟ್ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಲಿದೆ. ತೀರ್ಪು ಯಾರ ಪರವೇ ಬರಲಿ ಯಾರೂ ಭಾವೋದ್ವೇಗಕ್ಕೆ ಒಳಗಾಗಬಾರದು. ಕೋಮು ಸೌಹಾರ್ದ ಕದಡದೆ, ಶಾಂತಿ ಕಾಪಾಡಿಕೊಳ್ಳಬೇಕಾಗಿ ವಿನಂತಿ. ‘ತೀರ್ಪು ಏನೇ ಆಗಿರಲಿ ಶಾಂತಿ ಸೌಹಾರ್ದತೆಯ ಅಂತಃಶಕ್ತಿ ಜಗದ ಬೆಳಕಾಗಲಿ’ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
ಶತಮಾನದಷ್ಟು ಹಳೆಯದಾದ ಅಯೋಧ್ಯೆ ವಿವಾದ ಕುರಿತು, ಸುಪ್ರೀಮ್ ಕೋರ್ಟ್ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಲಿದೆ. ತೀರ್ಪು ಯಾರ ಪರವೇ ಬರಲಿ ಯಾರೂ ಭಾವೋದ್ವೇಗಕ್ಕೆ ಒಳಗಾಗಬಾರದು. ಕೋಮು ಸೌಹಾರ್ದ ಕದಡದೆ, ಶಾಂತಿ ಕಾಪಾಡಿಕೊಳ್ಳಬೇಕಾಗಿ ವಿನಂತಿ.
— B.S. Yediyurappa (@BSYBJP) November 9, 2019
"ತೀರ್ಪು ಏನೇ ಆಗಿರಲಿ
ಶಾಂತಿ- ಸೌಹಾರ್ದತೆಯ
ಅಂತಃಶಕ್ತಿ ಜಗದ ಬೆಳಕಾಗಲಿ"#AYODHYAVERDICT pic.twitter.com/E32ynJ1fs6