ಅಯೋಧ್ಯೆ ತೀರ್ಪಿನ ಶ್ರೇಯವನ್ನು ಕೇಂದ್ರ ಸರಕಾರ ಪಡೆದುಕೊಳ್ಳುವ ಹಾಗಿಲ್ಲ: ಉದ್ಧವ್ ಠಾಕ್ರೆ

ಮುಂಬೈ: ಅಯೋಧ್ಯೆ ವಿವಾದದ ಕುರಿತಾದ ಸುಪ್ರೀಂ ಕೋರ್ಟಿನ ತೀರ್ಪಿನ ಶ್ರೇಯವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
"ರಾಮ ಮಂದಿರ ನಿರ್ಮಾಣ ಕುರಿತಂತೆ ಕಾನೂನು ರಚಿಸುವಂತೆ ನಾವು ಸರಕಾರವನ್ನು ಕೇಳಿಕೊಂಡಿದ್ದೆವು. ಆದರೆ ಸರಕಾರ ಅದನ್ನು ಮಾಡಲಿಲ್ಲ. ಈಗ ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ಸರಕಾರ ಅದರ ಶ್ರೇಯ ಪಡೆದುಕೊಳ್ಳಲು ಸಾಧ್ಯವಿಲ್ಲ'' ಎಂದು ಉದ್ಧವ್ ಹೇಳಿದರು.
Next Story





