ಎಂ.ಫ್ರೆಂಡ್ಸ್ ವತಿಯಿಂದ ಮೀಲಾದುನ್ನಬಿ: ವೆನ್ಲಾಕ್ ಗೆ ನೀರು ಶುದ್ಧೀಕರಣ ಯಂತ್ರ ಕೊಡುಗೆ

ಮಂಗಳೂರು: ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ವತಿಯಿಂದ ಮೀಲಾದುನ್ನಬಿ ಆಚರಣೆಯು ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಶನಿವಾರ ನಡೆಯಿತು.
ಎಂ.ಫ್ರೆಂಡ್ಸ್ ಸದಸ್ಯರಾದ ಇರ್ಶಾದ್ ತುಂಬೆ ಪ್ರಾಯೋಜಕತ್ವದಲ್ಲಿ ಮರ್ಹೂಂ ಮಹಮ್ಮದ್ ಶಬೀರ್ ಅವರ ಸ್ಮರಣಾರ್ಥ ವೆನ್ಲಾಕ್ ಆಸ್ಪತ್ರೆಯ ವಾರ್ಡ್ ನಂಬ್ರ 9ರ ಬಳಿ ನೀರು ಶುದ್ಧೀಕರಣ ಯಂತ್ರವನ್ನು ಸ್ಥಾಪಿಸಿ ಉದ್ಘಾಟಿಸಲಾಯಿತು.
ಝೈನಬಾ ಹಸೈನಾರ್ ಹಾಜಿ ಅವರು ಉದ್ಘಾಟಿಸಿದರು. ವೆನ್ಲಾಕ್ ಜಿಲ್ಲಾಸ್ಪತ್ರೆಯ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ, ಎಂ.ಫ್ರೆಂಡ್ಸ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು, ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಟ್ರಸ್ಟಿಗಳಾದ ಇರ್ಶಾದ್ ತುಂಬೆ, ಹನೀಫ್ ಕುದ್ದುಪದವು, ಮೊಯ್ದಿನ್ ಎಂ.ಸಿ., ಸಮದ್ ಫರಂಗಿಪೇಟೆ, ಯೂಸುಫ್ ಫರಂಗಿಪೇಟೆ, ಸೌಹಾನ್ ಎಸ್.ಕೆ., ಅಶ್ಫಾಕ್ ಉಪಸ್ಥಿತರಿದ್ದರು. ಬಳಿಕ ವೆನ್ಲಾಕ್ ಆಸ್ಪತ್ರೆಯ ರೋಗಿಗಳ ಜೊತೆಗಾರರಿಗೆ ಕಾರುಣ್ಯ ಯೋಜನೆಯಡಿ ಸ್ಪೆಷಲ್ ಫುಡ್ ವಿತರಿಸಲಾಯಿತು.
Next Story





