ಅಯೋಧ್ಯೆ ತೀರ್ಪಿನ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದು ಹೀಗೆ..

ಬೆಂಗಳೂರು, ನ.9: ರಾಮಜನ್ಮ ಭೂಮಿ ಮತ್ತು ಬಾಬರಿ ಮಸೀದಿ ಭೂ ವಿವಾದ ಸಂಬಂಧ ತೀರ್ಪನ್ನು ಚಿಂತಕ, ಬಹುಭಾಷಾ ನಟ ಪ್ರಕಾಶ್ ರಾಜ್ ಸ್ವಾಗತಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಮಂದಿರವೂ, ಮಸೀದಿಯೂ ಆಯೋಧ್ಯೆಯಲ್ಲಿಯೇ ನಿರ್ಮಾಣವಾಗಲಿದೆ. ಈಗಾಗಲೇ ಅಲ್ಲಿ ಸಾಕಷ್ಟು ರಕ್ತ ಹರಿದಿದ್ದು, ಮಾನವ ಜೀವನ ಅತ್ಯಂತ ಅಮೂಲ್ಯವಾಗಿದೆ. ಎಲ್ಲ ಹಿಂಸೆಯನ್ನು ನಿಲ್ಲಿಸಿ ನಾವೆಲ್ಲರೂ ಅಮೂಲ್ಯವಾದ ಮನುಷ್ಯನ ಜೀವನವನ್ನು ಕಾಪಾಡೋಣ ಎಂದು ಅಭಿಪ್ರಾಯಪಟ್ಟಿದ್ದಾರೆ.
Next Story