ಡಿಸೆಂಬರ್ನಲ್ಲಿ ಝರೀನ್- ಮೇರಿಕೋಮ್ ಮುಖಾಮುಖಿ
ಒಲಿಂಪಿಕ್ಸ್ ಆಯ್ಕೆ ಟ್ರಯಲ್
ಹೊಸದಿಲ್ಲಿ, ನ.9: ಕಳೆದ ತಿಂಗಳು ವಾಕ್ಸಮರ ನಡೆಸಿದ್ದ ಭಾರತದ ಬಾಕ್ಸರ್ ನಿಖಾತ್ ಝರೀನ್ ಕೊನೆಗೂ ಆರು ಬಾರಿಯ ವಿಶ್ವ ಚಾಂಪಿಯನ್ ಎಂ.ಸಿ. ಮೇರಿ ಕೋಮ್ ವಿರುದ್ಧ ಆಯ್ಕೆ ಟ್ರಯಲ್ಸ್ ನಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ.
ಡಿಸೆಂಬರ್ನ ಕೊನೆಯ ವಾರದಲ್ಲಿ 2020ರ ಟೋಕಿಯೊ ಒಲಿಂಪಿಕ್ಸ್ ಕ್ವಾಲಿಫೈಯರ್ನಲ್ಲಿ 51 ಕೆಜಿ ತೂಕ ವಿಭಾಗದಲ್ಲಿ ಭಾರತವನ್ನು ಯಾರು ಪ್ರತಿನಿಧಿಸುತ್ತಾರೆಂದು ಗೊತ್ತಾಗಲಿದೆ.
ಭಾರತದ ಬಾಕ್ಸಿಂಗ್ ಒಕ್ಕೂಟದ ಅಧ್ಯಕ್ಷ ಅಜಯ್ ಸಿಂಗ್ ತನ್ನ ಕಚೇರಿಯ ಸಿಬ್ಬಂದಿ ಮುಖಾಂತರ ಈ ನಿರ್ಧಾರವನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇಬ್ಬರೂ ಬಾಕ್ಸರ್ಗಳಿಗೆ ಶೀಘ್ರದಲ್ಲೇ ಈ ಕುರಿತು ಸೂಚನೆ ನೀಡಲಾಗುತ್ತದೆ.
ಹೊಸದಿಲ್ಲಿಯಲ್ಲಿ ಶನಿವಾರ ಭಾರತೀಯ ಕ್ರೀಡಾ ಪ್ರಾಧಿಕಾರದ(ಸಾಯ್)ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Next Story